ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡದ ೨೦ ಪದಗಳನ್ನು ಪತ್ತೆಮಾಡಿ

*ನಿಮ್ಮ ಮಿದುಳಿಗಷ್ಟು ಕೆಲಸ!*
*************************
ಮನೆಯಲ್ಲಿದ್ದು ಮೊದಲಿಗಿಂತಲೂ ಹೆಚ್ಚಿನ ಕೆಲಸ ಮಾಡಿ ಮಾಡಿ ಬೇಸರವೇ…??????
ಬೇಸರ ಕಳೆಯುವ ಈ ಕನ್ನಡದ ೨೦ ಪದಗಳನ್ನು ಪತ್ತೆಮಾಡಿ!
ಹಾಂ! ಪ್ರತಿಪದವೂ “ಲು” ಇಂದ ಕೊನೆಯಾಗಬೇಕು!

೧. ಕೃಷ್ಣನ ಕರೆ ಇದರಿಂದ!

೨. ಮಳೆ ಸುರಿಯುವುದು
ಇಲ್ಲಿಂದ!

೩. ದೊಡ್ಡ ಆಲದಮರ
ಕಾಣದಂತೆ ಸುತ್ತಲೂ
ಹರಡಿಕೊಂಡಿರುವುದು!

೪. ತಾಯ ಹಾಲು ಕುಡಿಯಲು
ಕಂದನು ಇಲ್ಲಿರಲೇಬೇಕು!

೫. ನನ್ನ ಪಕ್ಕ ಅಥವಾ ನಿಮ್ಮ
ಪಕ್ಕ!

೬. ಕಳವಳ, ಆತಂಕ

  ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದ ಇತಿಹಾಸ ಮತ್ತು ವಾಸ್ತುಶಿಲ್ಪ

೭. “ಕಾರ್ಗಾಲ ವೈಭವ” ದ
ಒಂದು ಮುಖ!

೮. ಸ್ವಚ್ಛಕರ್ಮಚಾರಿಗಳಿಗೆ ಇದು
ಬೇಕೇಬೇಕು!

೯. ದೇವರಮುಂದೆ ದೀಪ
ಹಚ್ಚಬೇಕೆ? ಇದು ಇದೆ
ತಾನೆ?!

೧೦. ಸೃಷ್ಟಿಯಲ್ಲಿನ sanitizer!

೧೧. ಕನ್ನಡದ ಭಾರ್ಗವ ಇದರ
ತೀರದವರು!

೧೨. ಇಲ್ಲಿಗೆ ಹಚ್ಚಿದರೆ
ವಿಭೂತಿಯಾದೆ!

೧೩. ಎಳೆಯ ಕಂದನ
ನಿದ್ರಾತಾಣ

೧೪. ದಾರವೋ ಹಗ್ಗವೋ,
ಹೀಗಾದರೆ ಬಿಡಿಸುವುದೇ
ಒಂದು ದೊಡ್ಡ ಕೆಲಸ!

೧೫. ಈ ಅಂಗವಿರುವುದು
ಆನೆಯೊಂದಕ್ಕೇ!

೧೬. ದಶಕಗಳ ಹಿಂದೆ ವಿದ್ಯುಚ್ಛಕ್ತಿ
ಇಲ್ಲದಿದ್ದಾಗ ಬೆಳಕಿಗೆ ಇದು
ಬೇಕಿತ್ತು!

  ದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್

೧೭. ಇದನ್ನು ತೆರೆದು
ಸೇವೆಯನು ಕೊಡೆಂದ
ಕನಕ!

೧೮. ಗಾಯಕನ ಎಡಪಕ್ಕ ಈ
ವಾದ್ಯ!

೧೯. ಇದರ ಯೋಗಿ ಬೆವರು
ಸುರಿಸಿದರೇ ನಮಗೆಲ್ಲ
ಅನ್ನ!

೨೦. ಹಳೆಯ ಕಿಟಕಿ,
ಬಾಗಿಲುಗಳಿಗೆ ಇದು
ಹಿಡಿಯುವುದುಂಟು!

One thought on “ಕನ್ನಡದ ೨೦ ಪದಗಳನ್ನು ಪತ್ತೆಮಾಡಿ

  1. ೧. ಕೃಷ್ಣನ ಕರೆ ಇದರಿಂದ – ಕೊಳಲು
    ೨. ಮಳೆ ಸುರಿವಿದು ಇಲ್ಲಿಂದ — ಮುಗಿಲು
    ೩. ದೊಡ್ಡ ಆಲದ ಮರ ಕಾಣದಂತೆ ಸುತ್ತಲೂ ಹರಡಿಕೊಂಡಿರುವುದು – ಬೀಳಲು
    ೪. ತಾಯ ಹಾಲ ಕುಡಿಯಲು ಕಂದನಿಲ್ಲಿರಬೇಕು — ಮಡಿಲು
    ೫. ನನ್ನ ಪಕ್ಕ ಅಥವಾ ನಿಮ್ಮ ಪಕ್ಕ — ಸುತ್ತಲು
    ೬. ಕಳವಳ, ಆತಂಕ — ದಿಗಿಲು
    ೭. “ಕಾರ್ಗಾಲ ವೈಭವದ” ಒಂದು ಮುಖ –
    ೮. ಸ್ವಚ್ಛಕರ್ಮಚಾರಿಗಳಿಗೆ ಇದು ಬೇಕೇ ಬೇಕು. – ಬರಲು
    ೯. ಸೃಷ್ಟಿಯಲ್ಲಿನ ಸ್ಯಾನಿಟೈಝೆರ್ – ಬಿಸಿಲು
    ೧೦. ದೇವರ ಮುಂದೆ ದೀಪ ಹಚ್ಚಬೇಕೆ? ಇದು ಇದೆ ತಾನೇ.. —
    ೧೧. ಕನ್ನಡದ ಭಾರ್ಗವ ಇಲ್ಲಿಯೇ ತೀರದವರು – ಕಡಲು
    ೧೨. ಇಲ್ಲಿಗೆ ಹಚ್ಚಿದರೆ ವಿಭೂತಿಯಾದೆ – ನೊಸಲು
    ೧೩. ಎಳೆಯ ಕಂದನ ನಿದ್ರಾ ತಾಣ – ತೊಟ್ಟಿಲು
    ೧೪. ದಾರವೋ, ಹಗ್ಗವೋ ಹೀಗಾದರೆ ಬಿಡಿಸುವುದೇ ಒಂದು ದೊಡ್ಡ ಕೆಲಸ – ಗೋಜಲು
    ೧೫. ಈ ಅಂಗವಿರಿವುದು ಆನೆಯೊಂದಕ್ಕೆ – ಸೊಂಡಿಲು
    ೧೬. ದಶಕಗಳ ಹಿಂದೆ ವಿದ್ಯುಚ್ಛಕ್ತಿ ಇಲ್ಲದಿದ್ದಾಗ ಬೆಳಕಿಗೆ ಇದು ಬೇಕಿತ್ತು – ಕಂದೀಲು
    ೧೭. ಇದನ್ನು ತೆರೆದು ಸೇವೆಯನು ಕೊಡೆಂದ ಕನಕ — ಬಾಗಿಲು
    ೧೮. ಗಾಯಕನ ಎಡ ಪಕ್ಕ ಈ ವಾದ್ಯ – ಪಿಟೀಲು
    ೧೯. ಇದರ ಯೋಗಿ ಬೆವರ ಸುರಿಸಿದರೆ ನಮಗೆಲ್ಲ ಅನ್ನ – ನೇಗಿಲು
    ೨೦. ಹಳೆಯ ಕಿಟಕಿ ಬಾಗಿಲುಗಳಿಗೆ ಇದು ಹಿಡಿಯುವುದುಂಟು – ಗೆದ್ದಲು

Leave a Reply to Ravi BS Cancel reply

Your email address will not be published. Required fields are marked *

Translate »