ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡ ಒಗಟು – ಉತ್ತರ ಹೇಳಿ

ಒಗಟು – ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ / One brother comes down while other goes up
ಉತ್ತರ – ರೊಟ್ಟಿ / Roti

ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ಹಾಗಾದರೆ ನಾನು ಯಾರು
??

ರಾಮ ನಂಥ ಸಮುದ್ರ ವಜ್ರದಂಥ ಮೀನು, ನೀರು ಬತ್ತಿದರೆ ಮೀನು ಸಾಯುತ್ತೆ ?
ಹಣತೆ

ಚಿನ್ನದ ಹಕ್ಕಿ ಬಾಲದಿಂದ ನೀರು ಕುಡಿಯುತ್ತದೆ ?
ಹಣತೆ

ಚಿಕ್ಕ ಬೋರನ ಬಗಲಲ್ಲಿ ಕತ್ತಿ
?? ಹುರುಳಿಕಾಯಿ ??

ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ಹಾಗಾದರೆ ನಾನು ಯಾರು
??

ಹೊರಗಿನದ್ದನ್ನು ಎಸೆದು ಒಳಗಿನದ್ದನ್ನು ಬೇಯಿಸಬೇಕು!
ನಂತರ ಹೊರಗಿದ್ದನ್ನು ತಿಂದು ಒಳಗಿನದ್ದನ್ನು ಎಸೆಯಬೇಕು!
ಜೋಳ

ಕತ್ತೆ ಇಲ್ಲದ ಕೆರೆಯಲ್ಲಿ ತಟ್ಟೆ ತೇಲಿ ಬರುತ್ತದೆ
ಆಕಾಶದಲ್ಲಿ ಚಂದ್ರ

ಮರದ ಮೇಲಿರುವೆ ಪಕ್ಷಿಯಲ್ಲ
ಹಸಿರು ಅಂಗಿ ತೊಟ್ಟಿರುವೆ ಬಾಲಕನಲ್ಲ
ಕೆಂಪು ಮೋತಿ ಇದೆ ಗಿಳಿಯಲ್ಲ
??

ಒಂದು ಮರ ಕವಲೊಡೆದ್ದು ಎರಡು ಭಾಗ ಗಳಾಗಿ 15 ಬಿಳಿ ಎಲೆ 15 ಕರಿ ಎಲೆ
??

ಒಂದು ಕುಂಟೆ ರಾಗಿ ಒಬ್ಬನೇ ತಿನ್ನುತ್ತಾನೆ
ಗಿರಣಿ / ಬೀಸೋಕಲ್ಲು

ಕೈ ಇದ್ದೋನಿಗೆ ಕಾಲು ಇರಲ್ಲ , ಕಾಲು ಇದ್ದೋನಿಗೆ ಕೈ ಇರಲ್ಲ ?
ಅಂಗಿ / ಪೈಜಾಮ

ಬಿಳಿ ಕುದುರೆಗೆ ಹಸಿರು ಬಾಲ , ಕೆಂಪು ಕುದುರೆಗೂ ಹಸಿರು ಬಾಲ ಏನಿದು ?
ಮೂಲಂಗಿ / ಕ್ಯಾರೆಟ್

ಅಣ್ಣ ತಮ್ಮ ಇಬ್ಬರು ಮುರಿಯದ ಹಾಗೆ 3 ರೊಟ್ಟಿ ತಿನ್ನುತ್ತಾರೆ
??

ಕಲ್ಲಿನ ಮೇಲೆ ಕುಣಿಯುತ್ತೆ ಬೇಲಿಯ ಮೇಲೆ ಮಲಗುತ್ತೆ
ಒಗೆದ ಬಟ್ಟೆ

ಕೈನ ಒಬ್ಬರಿಗೆ ಕೊಡುತ್ತೆ , ಕಾಲು ಇನ್ನೊಬ್ಬರಿಗೆ ಕೊಡುತ್ತೆ ಮತ್ತು ದೇಹವನ್ನ ಬೇರೊಬ್ಬರಿಗೆ ಕೊಡುತ್ತೆ ಏನು ?
??

ಕರಿ ಸೀರಿ ಉಟ್ಟಾಳ, ಕಾಲುಂಗುರ ಇಟ್ಟಾಳ, ಮೇಲೆ ಹೋಗತಾಳ, ಕೆಳಗೆ ಬರತಾಳ
ಒನಕೆ

ಸಾಗರ ಪುತ್ರ ಸಾರಿಗೆ ಮಿತ್ರ
ಉಪ್ಪು

ಬೆಳಗ್ಗೆ 4 ಕಣ್ಣು , ಮಧ್ಯಾಹ್ನ 8 ಕಣ್ಣು , ರಾತ್ರಿ 12 ಕಣ್ಣು
???

ಸಹೋದರ ಮತ್ತು ಸಹೋದರಿ ಶಾಲೆಗೆ ಹೋಗುವ ಒಂದು ವಸ್ತು ಕೆಳಗೆ ಬೀಳುತ್ತೆ. ಆ ವಸ್ತುವಿನ ಹೆಸರು, ಮತ್ತು ಅವರ ಹೆಸರು ಎರಡು ಒಂದೇ , ಏನದು ?
ಸೂರ್ಯ ಕಾಂತಿ ಹೂ / ವಿಜಯ ವಾಣಿ ಪೇಪರ್

ಮೂರು ಮೊಳ ನಾಲಿಗೆ ,೧೬೬೦೦೦ ಹಲ್ಲು ,೨ ಕೈ ,೨ ಕಾಲು ನಾನು ಯಾರು ?
??

ಒಗಟು 10 – ಮಡಿಸಿದರೆ ಮೊಗ್ಗು ! ಬಿಡಿಸಿದರೆ ಹೂವು ! ಪರಿಮಳವಿಲ್ಲ ವಾಸ್ನೆ ಇಲ್ಲ ! / If folded its a bud , when opened its a flower , it has no scent .
ಉತ್ತರ – ಕೊಡೆ / Umbrella

ಒಗಟು 9 – ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ ! / Gold is thrown , silver is eaten
ಉತ್ತರ – ಬಾಳೆ ಹಣ್ಣು

ಒಗಟು 9 – ಅಕ್ಷರಗಳಿದ್ದರೂ ಪುಸ್ತಕವಲ್ಲ ! ಸಿಂಹವಿದ್ದರೂ ಅರಣ್ಯವಲ್ಲ ! ದುಂಡಾಗಿದ್ದರೂ ಚಕ್ರವಲ್ಲ ! ನಾನ್ಯಾರು ? / It has letters but its not a book , it has a lion but not a forest, it is round , but not a wheel

ಉತ್ತರ – ನಾಣ್ಯ / coin

ಒಗಟು 8 – ಹೋದ ನೆಂಟ ಬಂದ ನೆಂಟ ! ಬಂದ ದಾರಿ ಗೊತ್ತಿಲ್ಲ / The guest comes and goes , but the way they come is not known
ಉತ್ತರ – ನೆರಳು / Shadow

ಒಗಟು 7 – ಕಣ್ಣಿಗೆ ಹತ್ತಿರ , ಕಾಲಿಗೆ ದೂರ / Near for eyes , Far for Legs
ಉತ್ತರ – ದಿಗಂತ / Horizons

ಒಗಟು 6 – ಊರುಂಟು ಜನರಿಲ್ಲ ! ನದಿಯುಂಟು ನೀರಿಲ್ಲ ! ರಸ್ತೆಯುಂಟು ವಾಹನವಿಲ್ಲ ! ಹಾಗಾದರೆ ನಾನ್ಯಾರು ? / Village exists , but no one is there , There is river but no water , There is road but no vehicles , Who am ! ?
ಉತ್ತರ – ಭೂಪಟ / Map

ಒಗಟು 5 – ಅಣ್ಣ ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ ! ಆದರೆ ಯಾರೂ ಮುಂದೆ ಹೋಗುವುದಿಲ್ಲ ! / Both brothers try to go first one after other , but none of them comes first.
ಉತ್ತರ – ಕಾಲುಗಳು / Legs

ಒಗಟು 4 – ಹೋಗುತ್ತಾ ಬರುತ್ತಾ ಇರುವುದು ಎರಡು , ಎರಡೂ ಹೋದ ಮೇಲೆ ಬರಲಾರವು / Both keep coming and going , But both when gone does not come back
ಉತ್ತರ – ಸಿರಿತನ – ಬಡತನ , ಪ್ರಾಣ – ಮಾನ / Wealth – Poverty , Life force – Respect

ಒಗಟು 3 – ಕಚ್ಚಿದರೆ ಮಾತ್ರ ಕಚ್ಚುವುದು ! ಕಚ್ಚಲ್ಲ , ಹಾವಲ್ಲ , ಚೇಳಲ್ಲ / It bites if we bite ! It does not bite , its not a snake nor a scorpio
ಉತ್ತರ – ಮೆಣಸಿನ ಕಾಯಿ / Chilli

ಒಗಟು 2 – ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು / Bring it from shop and cry in front of it
ಉತ್ತರ – ಈರುಳ್ಳಿ / Onion

ಒಗಟು 1 – ಎರಡು ಮನೆಗೆ ಒಂದೇ ದೂಲ / Both houses have a common wall
ಉತ್ತರ – ಮೂಗು / Nose

ಒಗಟು 20 – ನಾಲಿಗೆಯುಂಟು , ಮಾತಾಡುವುದಿಲ್ಲ ! ಮುಳ್ಳುಂಟು , ಪೊದೆಯಲ್ಲ ! / It has tongue but does not speak , It has a thorn but no bushes
ಉತ್ತರ – ಪೆನ್ನು / Pen

ಒಗಟು 19 – ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ / Good Hen, has layed eggs in torns
ಉತ್ತರ – ನಿಂಬೆಹಣ್ಣು / Lemon

ಒಗಟು 18 – ಹೊಕ್ಕುವಾಗ ಒಂದು ಹೊರಟಾಗ ನೂರು / While taking its one , while sending its many
ಉತ್ತರ – ಶ್ಯಾವಿಗೆ / Noodles

ಒಗಟು 17 – ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ ! / If kept within palms it fills the palm , if left fills the whole room
ಉತ್ತರ – ದೀಪ / Lamp light

ಒಗಟು 16 – ಬಿಳಿ ಲಂಗದ ಹುಡುಗಿ ! ಎಳೆದರೆ ಬರ್ತಾಳೆ ! ಬಿಟ್ಟರೆ ಓಡ್ತಾಳೆ / While skirt Girl ! If pulled comes in ! If pushed rushes out
ಉತ್ತರ – ಸಿಗರೇಟ್ ಹೊಗೆ / Cigarette smoke

ಒಗಟು 15 – ಗರಿಕೆ ಆಸೆ ದೇವರು ! ವರ್ಶಕ್ಕೊಮ್ಮೆ ಬರ್ತಾನೆ / Grass loving god who comes once in a year
ಉತ್ತರ – ಗಣಪತಿ / Ganapathi

ಒಗಟು 15 – ಕಪ್ಪೆ ಮುಟ್ಟದ ಕೈಲಾಸದ ನೀರು ! The god’s water which a frog can’t touch
ಉತ್ತರ – ಎಳೆನೀರು

ಒಗಟು 14 – ಕಲ್ಲನ್ನು ತುಳಿಯುತ್ತೆ ! ಮುಳ್ಳನ್ನು ಮೂಯುತ್ತೆ ! ನೀರು ಕಂಡ್ರೆ ನಿಲ್ಲುತ್ತೆ ! / It oppresses stone ! It pierces the thorns ! It stops at water
ಉತ್ತರ – ಚಪ್ಪಲಿ / Slippers

ಒಗಟು 13 – ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ ! / Mother’s Bed cannot be tied , Father’s money cannot be counted

ಉತ್ತರ – ಆಕಾಶ , ನಕ್ಷತ್ರಗಳು

ಒಗಟು 12 – ನೀಲಿ ಕೆರೇಲಿ ಬಿಳಿ ಮೀನು / A white fish in a blue lake
ಉತ್ತರ – ನಕ್ಷತ್ರ

  ಥಟ್ ಅಂಥ ಹೇಳಿ ? ಕನ್ನಡ ಕ್ವಿಜ್

ಒಗಟು 11 – ಕಣ್ಣಿಗೆ ಕಾಣೋದಿಲ್ಲ ! ಕೈಯಿಗೆ ಸಿಗೋದಿಲ್ಲ ! / Invisible and cannot catch
ಉತ್ತರ – ಗಾಳಿ / Wind

ಒಗಟು 30 – ಅಪ್ಪಾಂದ್ರೆ ಹೊಡಿತದೆ , ಅವ್ವಾಂದ್ರೆ ಹೊಡಿದಿಲ್ಲ – In kannada if u say Appa it claps , if u say Amma it doesnt clap. Its reverse in English if u say Father and Mother
ಉತ್ತರ – ತುಟಿಗಳು / Lips

ಒಗಟು 29 – ಒಂದು ಕಂಬ , ಅದಕ್ಕೆ ನಾಲ್ಕು ಕಿವಿಗಳು , ಅದರ ಮೆಲೊಂದು ಗುಂಡು / One pillar , it has 4 ears and over it one ball
ಉತ್ತರ – ಲವಂಗ / Clove

ಒಗಟು 28 – ಕುತ್ತಿಗೆಗೆ ಹಾಕಿದರೆ ಬರುತ್ತೆ , ಇಲ್ಲದಿದ್ದರೆ ಇಲ್ಲ / If you pull on its neck , it comes , else it does’nt
ಉತ್ತರ – ಬಿಂದಿಗೆ / Water-pot

ಒಗಟು 27 – ತಂದವರೊಬ್ಬರು ! ಹಿಡಿದವರೊಬ್ಬರು ! ಹೊತ್ತವರೊಬ್ಬರು / Brought by someone , Caught by someone , Taken by someone
ಉತ್ತರ – ಬಳೆ / Bangles

ಒಗಟು 26 – ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ? / I sleep in morning and wake up by night , who am I ?
ಉತ್ತರ – ರಸ್ತೆ ದೀಪ / Street light

ಒಗಟು 25 – ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ! ಬೆನ್ನು ತೋಳುಂಟು ಮನುಷ್ಯನಲ್ಲ / It has 4 legs , but its not a animal . It has chest and Back , but its not human
ಉತ್ತರ – ಕುರ್ಚಿ / Chair

ಒಗಟು 24 – ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ ! / It was born in water , brought up in water , but when sees water disappears !!
ಉತ್ತರ – ಉಪ್ಪು / Salt

ಒಗಟು 23 – ಒಂದೇ ಕುಪ್ಪಿಲಿ , ಎರಡು ತರಾ ತುಪ್ಪ ! / In the same vial , there are two types of ghee
ಉತ್ತರ – ಮೊಟ್ಟೆ / Egg

ಒಗಟು 22 – ಆರು ಗೆರೆವುಂಟು , ಈರೆಕಾಯಲ್ಲ ! ಹುಳಿವುಂಟು , ಹುಣಸೆ ಅಲ್ಲ ! ಹಳದಿವುಂಟು , ನಿಂಬೆ ಹಣ್ಣಲ್ಲ ! / It has 6 lines , but its not ridge gourd ! It is sour but its not tamarind ! It is little yellowish , but its not lemon
ಉತ್ತರ – ನೆಲ್ಲಿಕಾಯಿ / Amla (Gooseberry)

ಒಗಟು 21 – ಕಾಲುಂಟು ಕೈಯಿಲ್ಲ ! ನಡುವುಂಟು ತಲೆಯಿಲ್ಲ ! ರಂಧ್ರಗಳ್ಳುಂಟು / It has legs , but no hands , it has waist but no head , it has many holes
ಉತ್ತರ – ಪ್ಯಾಂಟು / Pant

ಒಗಟು 60 – ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ , ಉಚ್ಚಿ ಹುಯ್ಯುವ ಮರ / Curvy tree , if you bite it , it spills its urine !!
ಉತ್ತರ – ಕಬ್ಬು / Sugarcane

ಒಗಟು 59 – ಅವ್ವ ನೋಡುದ್ರೆ ಕುಳ್ಳಿ , ಮಗಳ ನೋಡುದ್ರೆ ಮಾರುದ್ದ ಅವ್ಳೆ / Mother looks short , but daughter is very long
ಉತ್ತರ – ಸೂಜಿ ದಾರ / Needle and Thread

ಒಗಟು 58 – ಕಪ್ಪೆ ಮುಟ್ಟದ ಕೈಲಾಸದ ನೀರು / Heaven’s water which a frog cannot touch
ಉತ್ತರ – ಎಳೆ ನೀರು / Coconut water , Tender coconut

ಒಗಟು 57 – ಒಂದು ಹಸ್ತಕ್ಕೆ ನೂರೆಂಟು ಬೆರಳು / One hand has hundreds of fingers
ಉತ್ತರ – ಬಾಳೆ ಗೊನೆ / Banana fruit branch

ಒಗಟು 56 – ಹರಯದಲ್ಲಿ ಹಸಿರು , ದುರದಲ್ಲಿ ಕೆಂಪು , ಮುಪ್ಪಿನಲ್ಲಿ ಕಪ್ಪು / It is green during teen , red during maturity and Black during old age
ಉತ್ತರ – ನೆರಳೆ ಹಣ್ಣು / Jamun fruit

ಒಗಟು 55 – ಅಕ್ಕನ ಕೈಗೆ ಇಕ್ಕೊರುಂಟು , ಅಳಿಸೋರಿಲ್ಲ / There are to put on sister’s hand , but none to remove it
ಉತ್ತರ – ಹಚ್ಚೆ / Tattoo

ಒಗಟು 54 – ಅಟ್ಟದ ತುಂಬಾ ಹಗ್ಗ ಹಾಸೈತೆ , ಅದರ ಮೇಲೆ ಭೂತ ಕೂತವ್ನೆ / On the roof , rope is spread and over it is sitting a ghost
ಉತ್ತರ – ಕುಂಬಳ ಕಾಯಿ / Pumpkin

ಒಗಟು 53 – ಅಂಗಡಿಯಲ್ಲಿ ಮಾರುವುದಿಲ್ಲ , ತಕ್ಕಡಿಯಲ್ಲಿ ತೂಗುವುದಿಲ್ಲ , ಅದಿಲ್ಲದಿದ್ದರೆ ನಮ್ಮ ಮನೆಯಲ್ಲಿ ಹಬ್ಬ ಆಗುವುದೇ ಇಲ್ಲ / It is not sold at shop , it is not weighed , without that in our home festivals are not started.
ಉತ್ತರ – ಸಗಣಿ / Cowdung

ಒಗಟು 52 – ನೆತ್ತಿಯಲ್ಲಿ ಉಣ್ಣುವುದು, ಸುತ್ತಲೂ ಸುರಿಸುವುದು , ಎತ್ತಿದರೆ ಎರಡು ಹೋಳಾಗುವುದು / It eats on top and spreads all around , on lifting it breaks into two
ಉತ್ತರ – ರಾಗಿಕಲ್ಲು / Raagi Stones

ಒಗಟು 51 – ಅಜ್ಜನ್ನ ಹೊಟ್ಟೆ ಹಿಡ್ಕೊಂಡು , ಮೊಮ್ಮಗ ನೇತಾಡ್ತಾ ಅವ್ನೆ / Holding grandfather’s stomach grandson is hanging down
ಉತ್ತರ – ಗೇರುಬೀಜ / Cashew Nut

ಒಗಟು 50 – ಬಿಳಿಯ ಪೊರೆ ಬಿಡುವ ನಾಗವಲ್ಲ ! ಗುಂಡಗಿರುವೆ ಗೋಲಿಯ ಗುಂಡಲ್ಲ! ದೇಹವು ಮಡಿಕೆಗಳಿಂದ ಕೂಡಿರುವುದು , ಕುಂಬಳ ಕಾಯಲ್ಲ / I am not a snake which leaves its white scurf , I am round but not a ball , Body is like a pot , but I am not pumpkin
ಉತ್ತರ – ಬೆಳ್ಳುಳ್ಳಿ / Garlic

ಒಗಟು 49 – ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಣ್ಣ , ಬಾವಿಗೆ ಹಾಕಣ್ಣ / Anganna , Manganna remove your shirt and dive inside the well
ಉತ್ತರ – ಬಾಳೆ ಹಣ್ಣು / Banana

ಒಗಟು 48 – ನಾರಾಯಣ ಕಟ್ಟಿಸಿದ , ನಾಲ್ಕು ಮೂಲೆ ಬಾವಿ , ನೀರಿಲ್ಲ, ಮೀನಿಲ್ಲ / Narayana’s 4 corner well which has no water nor fishes
ಉತ್ತರ – ಬೆಲ್ಲದ ಅಚ್ಚು / Jaggery Cube

ಒಗಟು 47 – ಆಡಿ ಓಡಾಡೋ ಗಾಡಿಗೆ , ಆರಡಿ ನೆಲವಷ್ಟೇ ಸ್ವಂತ / For a playful wandering vehicle , only a 6 feet is its own
ಉತ್ತರ – ದೇಹ , ಸ್ಮಶಾನ / Human Body and crematorium

ಒಗಟು 46 – ಗೋಡೆ ಮೇಲೆ ಕರೀ ರೊಟ್ಟಿ / A black roti on wall
ಉತ್ತರ – ಬೆರಣಿ / Cow-pat

ಒಗಟು 45 – ಅಪ್ಪನ ದುಡ್ಡು ಎಣಿಸೊಕ್ಕಾಗಲ್ಲ ! ಅವ್ವನ ಸೀರೆ ಮಡ್ಸೊಕಾಗಲ್ಲ ! / Father’s money cannot be counted , Mother’s saree cannot be folded.
ಉತ್ತರ – ನಕ್ಷತ್ರ – ಆಕಾಶ

ಒಗಟು 44 – ಆಕಡೆ ಈಕಡೆ ಬೆಟ್ಟ , ಮಧ್ಯದಲ್ಲಿ ಹುಲಿ ಕೂಗುತ್ತೆ / There are hills on either sides , in the middle the tiger roars
ಉತ್ತರ – ಹೂಸು / Fart

  ಕನ್ನಡ ಚಾಣಕ್ಯ ನೀತಿ - Kannada Chanakya Neeti

ಒಗಟು 43 – ತಲೆ ಮೇಲೆ ಹರಳು , ಬಾಯಲ್ಲಿ ಬೆರಳು / On top it has a pearl , inside mouth it has a finger
ಉತ್ತರ – ಉಂಗುರ / Ring

ಒಗಟು 42 – ಊರಿಗೆಲ್ಲ ಒಂದೇ ಕಂಬ್ಳಿ / Single blanket for the whole village
ಉತ್ತರ – ಆಕಾಶ / Sky

ಒಗಟು 41 – ಮಳೆ ಹುಯ್ಲಿ , ಹುಯ್ದೆ ಇರ್ಲಿ ಬಾಯಲ್ಲಾ ಕೆಂಪು , ಮೈಯೆಲ್ಲಾ ಹಸಿರು / Whether it rains or doesn’t rain , mouth is full of red and body is full of green
ಉತ್ತರ – ಗಿಳಿ / Parrot

ಒಗಟು 40 – ಬಿಳಿ ಹುಡುಗನಿಗೆ ಕರಿಟೋಪಿ / A black hat for a white boy
ಉತ್ತರ – ಬೆಂಕಿ ಕಡ್ಡಿ / Match box stick

ಒಗಟು 39 – ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ / Before the small brother serves one , the big brother serves twelve
ಉತ್ತರ – ಗಡಿಯಾರ / Clock

ಒಗಟು 38 – ಮಣ್ಣಿನಲ್ಲಿ ಹುಟ್ಟಿ , ಮಣ್ಣಿನಲ್ಲಿ ಬೆಳೆದು , ಮಣ್ಣಿನಲ್ಲಿ ಸಾಯುವುದು / Its born in mud , Its grown in Mud , It dies in Mud
ಉತ್ತರ – ಮಡಿಕೆ / Mud pot

ಒಗಟು 37 – ನೀರಿನಲ್ಲಿ ಹಾಕಿದರೆ ಮುಳುಗುವುದಿಲ್ಲ ! ಬೆಂಕಿಯಲ್ಲಿ ಸುಡುವುದಿಲ್ಲ , ಕಲ್ಲಲ್ಲ ! ಇದು ಇಲ್ಲದವರಿಲ್ಲ / It does not drown in water, it does not get burnt in fire , Its not a stone , There is no one without it
ಉತ್ತರ – ನೆರಳು / Shadow

ಒಗಟು 36 – ಅರಳುತ್ತೆ , ಹೂವಲ್ಲ ! ಬಿಸಿಲಿಗೆ ಬಾಡುವುದಿಲ್ಲ / It blossoms but not a flower , it never gets faded from sunrays
ಉತ್ತರ – ಛತ್ರಿ / Umbrella

ಒಗಟು 35 – ಅವ್ವ ಮುಳ್ಳಿ , ಮಗಳು ಕೆಂಪ್ಗೆ ಚಂದಾಗವಳೆ / Mother is thorny , Daughter is red and beautiful
ಉತ್ತರ – ಹಲಸು / Jackfruit

ಒಗಟು 34 – ಚಂದ್ರನಂತೆ ಗುಂಡಾಗಿ ಎಲೆಗಿಂತಲೂ ತೆಳುವಾಗಿ, ತಿಂದರೆ ಬಲು ರುಚಿ / Round like a moon , thin like a leaf , very tasty to eat.
ಉತ್ತರ – ಹಪ್ಪಳ / Pappad

ಒಗಟು 33 – ಕಪ್ಪುಂಟು ಕಸ್ತೂರಿಯಲ್ಲ , ಬಿಳ್ಪುಂಟು ಸುಣ್ಣವಲ್ಲ , ನೀರುಂಟು ಬಾವಿಯಲ್ಲ , ರೆಕ್ಕೆಯುಂಟು ಪಕ್ಷಿಯಲ್ಲ. / It has Black , but it is not musk , It has white but its not Lime , It has water but it is not a well , It has feathers but it is not a bird
ಉತ್ತರ – ಕಣ್ಣು / Eyes

ಒಗಟು 32 – ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ , ನಿಮ್ಮಪ್ಪನೂ ಎತ್ತಲಾರ , ನಮ್ಮಪ್ಪನೂ ಎತ್ತಲಾರ / In a dark house if a pillar falls your father also cannot lift , my father also cannot lift it
ಉತ್ತರ – ಸೂಜಿ / Needle

ಒಗಟು 31 – ಒಂದು ಸುಣ್ಣದ ಗೋಡೆಗೆ , ಒಂದೂ ಬಾಗಿಲಿಲ್ಲ / For one white wall , there are no doors
ಉತ್ತರ – ಕೋಳಿ ಮೊಟ್ಟೆ / Egg

ಒಗಟು 103 – ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು / It walks without legs , it speaks without mouth , its a home for many
ಉತ್ತರ – ನದಿ / River

ಒಗಟು 102 – ಕುಡಿಕೆಯಲ್ಲಿ ಮೆಣಸು / Pepper in the pot
ಉತ್ತರ – ಪರಂಗಿ ಹಣ್ಣು / Papaya

ಒಗಟು 101 – ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ / Fistful when covered with fist , Houseful when uncovered from fist
ಉತ್ತರ – ದೀಪ / Lamp

ಒಗಟು 100 – ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು / Green on top , Red and cool inside
ಉತ್ತರ – ಕಲ್ಲಂಗಡಿ / Water Melon

ಒಗಟು 99 – ಹಾರಿದರೆ ಹನುಮಂತ , ಕೂಗಿದರೆ ರಾವಣ , ಕುಳಿತರೆ ಮುನಿರಾಮ / Its Hanuman when it flies , Its Ravana when it screams , Its Munirama when it sits
ಉತ್ತರ – ಕಪ್ಪೆ / Frog

ಒಗಟು 98 – ಚಿಕ್ಕ ಮನೇಲಿ ಚಕ್ಕೆ ತುಂಬಿವೆ / In a small house , are filled with chips
ಉತ್ತರ – ಹಲ್ಲು / Teeth

ಒಗಟು 97 – ಉದ್ದ ಮರದಲ್ಲಿ ಕೆಂಪು ಸನ್ಯಾಸಿ / A red monk in a long tree
ಉತ್ತರ – ಅಡಿಕೆ ಕಾಯಿ / Areca nut

ಒಗಟು 96 – ನಿನ್ನ ಹೊಟ್ಟೆಯ ಮೇಲೆ , ನನ್ನ ಹೊಟ್ಟೆ / On your stomach is my stomach
ಉತ್ತರ – ರಾಗಿ ಕಲ್ಲು / Millet Stone

ಒಗಟು 95 – ಕಲ್ಲರಳಿ ಹೂವಾಗಿ , ಎಲ್ಲರಿಗೂ ಬೇಕಾಗಿ , ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ / Stone blossoms to flower , needed by everyone , serves as light for lord’s head
ಉತ್ತರ – ಸುಣ್ಣ / limestone

ಒಗಟು 94 – ಸತ್ತವನೇ ಸಾವಿನ ಸುದ್ದಿ ತಗೊಂಡು ಹೋಗ್ತಾನೆ / The dead person carries the news of his death everywhere
ಉತ್ತರ – ಹಲಸಿನ ಹಣ್ಣು / Jackfruit

ಒಗಟು 93 – ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ / Small box , gold box , when closed & opened three hundred boxes
ಉತ್ತರ – ದಾಳಿಂಬೆ ಹಣ್ಣು / Pomegranate

ಒಗಟು 92 -ಚೆಲ್ಲೋದುಂಟು , ಕುಯ್ಯೋದುಂಟು , ತಿನ್ನೋದಿಲ್ಲ / It can be scattered , it can be cut , but it cannot be eaten
ಉತ್ತರ – ಕೂದಲು / Hair

ಒಗಟು 91 – ಹತ್ನಾರ್ದ ಮರಕ್ಕೆ , ಹತ್ತುತನೆ ಕರಿಯಣ್ಣ / He climbs a tree which no one climbs
ಉತ್ತರ – ಇರುವೆ / Ant

ಒಗಟು 90 – ಸಾಯೋವರೆಗೂ ಹೂವಿಲ್ಲ , ಹಣ್ಣು ಮಾತ್ರ ಬಿಡ್ತದೆ / It does not give any flower till it dies , only bears fruit
ಉತ್ತರ – ಹತ್ತಿಹಣ್ಣು / Cotton fruit

ಒಗಟು 89 – ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ / It has a crown but not a king , it has a beard but not a turkey
ಉತ್ತರ – ಹುಂಜ / Cock

ಒಗಟು 88 – ಸುತ್ತಮುತ್ತ ಗರಿಕೆ , ನಡುವೆ ಕುಡಿಕೆ / Around are meadow grass , between them are small pots
ಉತ್ತರ – ಕಣ್ಣು / Eyes

ಒಗಟು 87 – ಹತ್ತಲಾರದ ಮರ , ಎಣಿಸಲಾರದ ಕಾಯಿ / A tree which cannot be climbed , A nut which cannot be counted
ಉತ್ತರ – ರಾಗಿ ಗಿಡ / Millet Plant

  ಕನ್ನಡದ ೨೦ ಪದಗಳನ್ನು ಪತ್ತೆಮಾಡಿ

ಒಗಟು 86 – ರಕ್ತವಿಲ್ಲದ ಮಾಂಸ , ಕರುಳಿಲ್ಲದ ಹೊಟ್ಟೆ / Bloodless Muscle , gutless stomach
ಉತ್ತರ – ಸೀಗಡಿ / Shrimp

ಒಗಟು 85 – ಮುಳ್ಳು ಮುಳ್ಳು ಮರದಲ್ಲಿ , ಮುತ್ತು ಮುತ್ತು ಕಾಯಿ / In a prickly thorn tree , are these pearls
ಉತ್ತರ – ನಿಂಬೆ ಹಣ್ಣು / Lemon

ಒಗಟು 84 – ಸಾಸಿವೆ ಗಾತ್ರದ ಕಲ್ಲು ಬಿದ್ದರೆ , ಸಾವಿರ ರೂಪಾಯಿನ ತೋಟ ಹಾಳು ! / A small stone like a mustard if falls , affects a thousand rupees farm
ಉತ್ತರ – ಕಣ್ಣು / Eyes

ಒಗಟು 83 – ಕರಿ ಮಂಚದ ಮೇಲೆ , ಹಾಕುವ ಹಾಸಿಗೆ , ತೆಗೆಯುವ ಹಾಸಿಗೆ / On a black bed , a mattress is put and removed
ಉತ್ತರ – ಕಾವಲಿ ದೋಸೆ / Dosa

ಒಗಟು 82 – ಅಪ್ಪ ಅಪ್ಪ ಮರ ನೋಡು , ಮರದೊಳಗೆ ಎಲೆ ನೋಡು , ಎಳೆಯೊಳಗೆ ತೂತು ನೋಡು , ತೂತೊಳಗೆ ಮಾತು ನೋಡು / See the tree , leaves inside the tree , holes inside the leaves , words inside the holes
ಉತ್ತರ – ಪುಸ್ತಕ / Book

ಒಗಟು 81 – ತೂತಿಲ್ಲದ ಒಡವೆ / Ornament without hole
ಉತ್ತರ – ಕುಂಕುಮ / Vermeil

ಒಗಟು 80 – ನಿಂಗಕ್ಕ ನೀರಕ್ಕ , ಹಾಕುವವರುಂಟು ತೆಗೆಯುವವರಿಲ್ಲ , ಅದೇನಕ್ಕ ? / Ningakka , Neerakka , they are there to put nut none to remove , what is it ?
ಉತ್ತರ – ಹಚ್ಚೆ / Tattoo

ಒಗಟು 79 – ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ / It sleeps on rock and dances on wire
ಉತ್ತರ – ಒಣಗಲು ಹಾಕಿದ ಬಟ್ಟೆ / Wet clothes

ಒಗಟು 78 – ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ / On a green plant , curd is thrown
ಉತ್ತರ – ಮಲ್ಲಿಗೆ / Jasmine

ಒಗಟು 77 – ಬಿಳೀ ಕಲ್ಮೇಲೆ ಕರಿಕಲ್ಲು , ಕರೀ ಕಲ್ಮೇಲೆ ರಂಗೋಲೆ / Over a white stone is a black stone and over that black stone is a drawing
ಉತ್ತರ – ಕಣ್ಣು / Eyes

ಒಗಟು 76 – ಗಿರಿರಾಜನ ಮಗಳ ಗಂಡನ ಹಿರಿ ಮಗನ ತಮ್ಮನ ವಾಹನದ ವೈರಿ / GiriRaaja’s daughter’s husband’s elder son’s brother’s vehicle’s enemy
ಉತ್ತರ – ನಾಯಿ / Dog

ಒಗಟು 75 – ಅಪ್ಪನ ದುಡ್ಡು ಎಣಿಸೊಕಾಗಲ್ಲ , ಅವ್ವನ ಸೀರೆ ಮಡಿಸೊಕ್ಕಾಗಲ್ಲ / Father’s money cannot be counted , Mother’s saree cannot be folded
ಉತ್ತರ – ನಕ್ಷತ್ರ ಆಕಾಶ / Stars & Sky

ಒಗಟು 75 – ಹತ್ತು ತಲೆಯುಂಟು ರಾವಣನಲ್ಲ , ಬಾಲವುಂಟು ಹನುಮಂತನಲ್ಲ , ಕಿರೀಟವುಂಟು ರಾಜನಲ್ಲ , ನಾನು ಯಾರು ? / I have 10 heads but I am not Raavana , I have a tail but not Hanuman , I have a crown but i am not a King , Who am I !
ಉತ್ತರ – ಹೀರೇಕಾಯಿ / Ridge Gourd

ಒಗಟು 74 – ಮೂವತ್ತೆರಡು ಜನ ಅಗಿತ್ತಾರೆ , ಒಬ್ಬ ರುಚಿ ನೋಡ್ತಾನೆ / Thirty two people chew it , while one person tastes it
ಉತ್ತರ – ಹಲ್ಲು ನಾಲಿಗೆ / Teeth and Tongue

ಒಗಟು 73 – ಮರದೊಳಗೆ ಮರ ಹುಟ್ಟಿ , ಭೂ ಚಕ್ರದ ಹಣ್ಣಾಗಿ , ತಿನ್ನಬಾರದ ಹಣ್ಣು ಬಲು ಚಂದ / A tree growing inside a tree in the form of a wheel has a beautiful fruit which cannot be eaten
ಉತ್ತರ – ಎಳೇ ಕೂಸು / New born Child

ಒಗಟು 72 – ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ / This black man climbs a tree which no one may climb
ಉತ್ತರ – ಇರುವೆ / Ant

ಒಗಟು 71 – ನೋಡಿದರೆ ಮಲ್ಲಿಗೆ ಹೂ , ಕೈಲಿ ತಕ್ಕಂಡು ಮುಟ್ಟೋಕ್ಕೆ ಆಗೋದಿಲ್ಲ / Looks like Jasmine flower , but cannot touch and hold it in hand
ಉತ್ತರ – ಚುಕ್ಕಿ / Star

ಒಗಟು 70 – ನಾಲ್ಕು ಕಾಲುಂಟ್ಟು ಮೃಗವಲ್ಲ , ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ ! / I have 4 legs but not an animal , I fly but I am not a bird , no one loves babies like me
ಉತ್ತರ – ತೊಟ್ಟಿಲು / Cradle

ಒಗಟು 69 – ಬೆನ್ನಿನಿಂದ ತಿನ್ನುವುದು , ಬಾಯಿಂದ ಉಗುಳುವುದು , ಎದುರಾದವರನ್ನು ಕೊಲ್ಲುವುದು, ಹಾಗಾದರೆ ನಾನು ಯಾರು / I eat from back , spit from mouth , kill who is in front of me , who am I
ಉತ್ತರ – ಬಂದೂಕ / Gun

ಒಗಟು 68 – ಕೆಂಪು ಹೆಣ್ಣಿನ ತುಟಿ ಕರೀಗಿದೆ / A red woman’s lips are black
ಉತ್ತರ – ಗುಲಗಂಜಿ / Indian Licorice

ಒಗಟು 67 – ಕಿರಿ ಮನೆಗೆ ಚಿನ್ನದ ಬೀಗ / A golden lock for a small home
ಉತ್ತರ – ಮೂಗುತಿ / Nose stud

ಒಗಟು 66 – ಎಷ್ಟೇ ಮಳೆ ಬಂದರೂ ನೆನೆಯುವುದಿಲ್ಲ / It does not soak even with heavy rains
ಉತ್ತರ – ಎಮ್ಮೆ ಕೆಚ್ಚಲು / Buffalo Udder

ಒಗಟು 65 – ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು / When sheep screams , this has holes all around its body
ಉತ್ತರ – ಒಂದರಿ / Sieve

ಒಗಟು 64 – ಆರು ಕಾಲು ಅಪ್ಪಣ್ಣ ಕೆರೆ ಬೋರಣ್ಣ ಕೂತುತಾವು ಮೀಸೆ ತಿರುವಣ್ಣ / Six legs Appanna , Sitting at lake Boranna twists its mustache
ಉತ್ತರ – ಜಿರಲೆ / Cockroach

ಒಗಟು 63 – ಬೇಲಿ ನುಗ್ಗೋ ನಾಯಿಗೆ ತಿಕದಲ್ಲಿ ಜನಿವಾರ / A thread is attached to bush entering dog’s bums
ಉತ್ತರ – ಸೂಜಿ / Thread needle

ಒಗಟು 62 – ನೀರುಂಟ್ಟು ಬಾವಿಯಲ್ಲ , ಜುಟ್ಟುಂಟು ಪೂಜಾರಿಯಲ್ಲ , ಮೂರು ಕಣ್ಣುಂಟು ಶಿವನಲ್ಲ / It has water but not a well, it has a crest but its not a priest , it has 3 eyes but it is not lord shiva
ಉತ್ತರ – ತೆಂಗಿನಕಾಯಿ / Coconut

ಒಗಟು 61 – ಅಕ್ಕಣ್ಣನಿಗೆ ಆರು ಕಣ್ಣು , ಮುಕ್ಕಣ್ಣಂಗೆ ಮೂರು ಕಣ್ಣು , ಲಿಂಗಪ್ಪನಿಗೆ ಒಂದೇ ಕಣ್ಣು / akkanna has 6 eyes , Mukkanna has 3 eyes , Lingappa has only 1 eye.
ಉತ್ತರ – ಕೊಳಲು , ತೆಂಗಿನಕಾಯಿ , ಸೂಜಿ / Flute , Coconut , Thread Needle

Leave a Reply

Your email address will not be published. Required fields are marked *

Translate »