ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ ದ೦ಡಿಸುವುದೂ ಪ್ರೀತಿಯೇ

ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ; ದ೦ಡಿಸುವುದೂ ಪ್ರೀತಿಯೇ

೦೧ . ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದಷ್ಟೇ ಪ್ರೀತಿಯಲ್ಲ, ಕೊಡಿಸದೇ ಇದ್ದು ನಿರಾಕರಣೆಯ ನೋವ ಸಹಿಸೋದನ್ನು ಕಲಿಸೋದು ಕೂಡ ಪ್ರೀತಿಯೇ…

೦೨ . ಕೇಳಿದಲ್ಲಿಗೆ ಕರೆದೊಯ್ಯುವುದು/ಕಳಿಸುವುದಷ್ಟೇ ಅಲ್ಲ, ಕರೆದೊಯ್ಯದೇ/ಕಳಿಸದೇ ಮನೆಯಲ್ಲಿ ಇರುವಂತೆ ಮಾಡಿ ನಿರಾಸೆಯನ್ನು ಅರಗಿಸಿಕೊಳ್ಳೋದನ್ನು ತಿಳಿಸೋದೂ ಪ್ರೀತಿಯೇ…

೦೩ . ಕೇಳಿದ್ದೆಲ್ಲವನ್ನೂ ಅವರ ಬಾಯಿಂದುದುರಿದ ತಕ್ಷಣ ಹಾಜರುಪಡಿಸೋದಷ್ಟೇ ಅಲ್ಲ, ತಮ್ಮ ಅಗತ್ಯಗಳಿಗಾಗಿ ಕಾಯುವ ತಾಳ್ಮೆ ಕಲಿಸೋದೂ ಪ್ರೀತಿಯೇ…

೦೪ . ಅವರು ಹೋದ ದಾರಿಯಲ್ಲಿಯೇ ಅವರನ್ನು ಅವರ ಪಾಡಿಗೆ ಬಿಡುವುದಷ್ಟೇ ಅಲ್ಲ, ಸರಿಯಾದ ದಾರಿಯನ್ನು ತೋರಿಸುವುದೂ ಕೂಡ ಪ್ರೀತಿಯೇ…

  ನವವಧುವಿನ ಕೈಯಲ್ಲಿ ಯಾಕೆ ಸೇರು ಒದ್ದೆಸುವುದು?

೦೫ . ಅವರಿಗೆ ಅನಿಸಿದ್ದೆಲ್ಲವನ್ನೂ ಹೇಳುವಷ್ಟು ಸ್ವಾತಂತ್ರ್ಯ ಕೊಡುವುದಷ್ಟೇ ಅಲ್ಲ, ಯಾವ ಸಮಯದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬುದರ ಅರಿವು ಮೂಡಿಸೋದೂ ಪ್ರೀತಿಯೇ…

೦೬ . ಆಸೆ ಪಟ್ಟದ್ದೆಲ್ಲವನ್ನೂ ಕೊಂಡು ಯಾ ತಯಾರಿಸಿ ತಿನ್ನಿಸುವುದಷ್ಟೇ ಅಲ್ಲ, ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸೋದನ್ನು ರೂಢಿಸೋದೂ ಪ್ರೀತಿಯೇ…

೦೭ . ಅವರಿಗೆ ಬೇಕಾದ್ದನ್ನೆಲ್ಲಾ ಮಾಡೋದಕ್ಕೆ ಅನುವು ಮಾಡಿಕೊಡೋದಷ್ಟೇ ಅಲ್ಲ, ಮಾಡಲೇಬಾರದಂಥವುಗಳ ಬಗ್ಗೆ ತಿಳಿಹೇಳಿ ತಿದ್ದೋದೂ ಕೂಡ ಪ್ರೀತಿಯೇ…

೦೮ . ಅವರಿಗೆ ಬೇಕಾದಷ್ಟು ಖರ್ಚಿಗೆ ಹಣ ನೀಡೋದಷ್ಟೇ ಅಲ್ಲ, ಅದರ ದುಡಿಮೆಗೆ ಪಟ್ಟ ಶ್ರಮ ಮತ್ತದರ ಬೆಲೆ ತಿಳಿಸೋದೂ ಪ್ರೀತಿಯೇ…

  ಗ್ರಾಮೀಣ ಪ್ರದೇಶಗಳ ಭೂ ಮಾಲಿಕತ್ವದ ದಾಖಲೆ ಈ ಸ್ವತ್ತು ವೆಬ್ಸೈಟ್

೦೯ . ಸಾಯುವವರೆಗೆ ದುಡಿಯುವುದನ್ನಷ್ಟೇ ಕಲಿಸೋದಲ್ಲ, ದುಡಿತವನ್ನು ಉಳಿಸಿ ಭವಿಷ್ಯಕ್ಕೆ ಕೂಡಿಡೋದನ್ನು ಕಲಿಸೋದೂ ಪ್ರೀತಿಯೇ…

೧೦ . ತನ್ನಿಂದಾಗದ ಕೆಲಸವೇ ಇಲ್ಲ ಎಂಬಷ್ಟು ಹುರುಪು ತುಂಬೋದಷ್ಟೇ ಅಲ್ಲ, ನನ್ನಂತೆಯೇ ಇತರರೂ ಎಲ್ಲರೂ ಕೂಡಿ ನೆಮ್ಮದಿಯಿಂದಿರಬೇಕೆಂಬುದನ್ನು ತಿಳಿಸೋದೂ ಪ್ರೀತಿಯೇ…

೧೧ . ಬರಿಯ ಸುಖ, ಗೆಲುವು, ಸಂತೋಷಗಳನ್ನಷ್ಟೇ ಒಪ್ಪೋದಲ್ಲ, ಕಷ್ಟ, ನೋವು, ಸೋಲುಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸೋದನ್ನ ಕಲಿಸೋದೂ ಪ್ರೀತಿಯೇ..‌.

೧೨ . ದುಡಿಮೆಯ ಜಾಲದಲ್ಲಿ ಸಿಕ್ಕು ಯಾಂತ್ರಿಕವಾಗೋದಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ರೂಢಿಸಿಕೊಳ್ಳೋದನ್ನ ಕಲಿಸೋದೂ ಪ್ರೀತಿಯೇ…

  ಶ್ರೀಕೃಷ್ಣನ ನಾಮಜಪ - ಕೃಷ್ಣ ಜನ್ಮಾಷ್ಟಮಿ

ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

Leave a Reply

Your email address will not be published. Required fields are marked *

Translate »