ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಂಗಳಸೂತ್ರ – ಕರಿಮಣಿ ಹೇಗಿರಬೇಕು ?

ಮಂಗಳಸೂತ್ರ..!

ಮಂಗಳಸೂತ್ರ (ಕರಿಮಣಿ)

ಮಂಗಳಸೂತ್ರ ಎಷ್ಟು ಉದ್ದವಿರಬೇಕು ?

ಅ. ‘ಮಂಗಳಸೂತ್ರವು ಸ್ತ್ರೀಯರ ಅನಾಹತ ಚಕ್ರದ ವರೆಗೆ (ಎದೆಯ ಮಧ್ಯದ ವರೆಗೆ) ಬರುವಷ್ಟು ಉದ್ದವಿರ ಬೇಕು. –

ಆ. ಮಂಗಳಸೂತ್ರವು ಅನಾಹತ ಚಕ್ರದವರೆಗಿದ್ದರೆ, ಅನಾಹತಚಕ್ರದ ಜಾಗೃತಿಯಿಂದ ನಿರ್ಮಾಣವಾಗುವ ಕ್ರಿಯಾಶಕ್ತಿಯ ರಜೋಗುಣೀ ಕಾರ್ಯವನ್ನು ತನ್ನಲ್ಲಿರುವ ಸತ್ತ್ವಗುಣದ ಸಹಾಯದಿಂದ ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ, ಅಂದರೆ ಕಾರ್ಯವನ್ನು ಮಾಡಿಯೂ ಮಾಡದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ, ಅಂದರೆ ಸ್ತ್ರೀಯರನ್ನು ಸತತವಾಗಿ ವರ್ತಮಾನ ಸ್ಥಿತಿಯಲ್ಲಿಡುತ್ತದೆ. –

ಮಂಗಳಸೂತ್ರದ ಬಟ್ಟಲುಗಳು

ಅ. ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು ? : ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ವಿನ್ಯಾಸ ವಿರಬಾರದು.

ಆ.ಗೋಲಾಕಾರ ಬಟ್ಟಲುಗಳ ಮಹತ್ವ :

೧. ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವದ ಅವಶ್ಯಕತೆಗನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇತರ ಆಕಾರಗಳಿಗಿಂತ ಹೆಚ್ಚಿರುತ್ತದೆ. ಆದುದರಿಂದ ಗೋಲಾಕಾರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.

  ಪಂಚಾಮೃತದ ವಿಶಿಷ್ಟತೆ, ಪ್ರಯೋಜನಗಳು

೨. ಗೋಲಾಕಾರವು (ಗೋಲವು) ಜ್ಞಾನಶಕ್ತಿಯ ಪ್ರತೀಕವಾಗಿದೆ.

೩. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವ ಗುಣಕ್ಕೆ ಸಂಬಂಧಿಸಿದೆ.

೪. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀ ಲಹರಿಗಳನ್ನು ಪ್ರದಾನಿಸುವುದಾಗಿದ್ದರೆ, ಬಾಹ್ಯಗೋಲವು ಶಿವರೂಪಿ ಬ್ರಹ್ಮನಿಗೆ ಸಂಬಂಧಿಸಿದೆ.

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುವುದರಿಂದಾಗುವ ಲಾಭಗಳು

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುತ್ತಾರೆ. ಚಿನ್ನವು ಬ್ರಹ್ಮಾಂಡದಲ್ಲಿನ ತೊಂದರೆ ದಾಯಕ ಸ್ಪಂದನಗಳನ್ನು ತನ್ನಲ್ಲಿ ಜಾಗೃತವಾಗಿರುವ ತೇಜಶಕ್ತಿಯಿಂದ ನಾಶಗೊಳಿಸುತ್ತದೆ.

ಸ್ತ್ರೀಯರ ನಿರ್ಮಿತಿಯ ಶಕ್ತಿಗೆ ಸಂಬಂಧಿಸಿದ ಮಂಗಳಸೂತ್ರದಲ್ಲಿನ ರಚನೆ : ಒಂದು ಬಟ್ಟಲು, ಅದರ ಮೇಲಿನ ಎರಡು ಮಣಿ ಮತ್ತು ಅವುಗಳನ್ನು ಜೋಡಿಸುವ ನಾಲ್ಕು ಎಸಳುಗಳ ಹೂವು ಒಟ್ಟಿಗೆ ಸೇರಿ ತ್ರಿಕೋನಾಕಾರ ನಿರ್ಮಾಣವಾಗುತ್ತದೆ. ತ್ರಿಕೋನಾಕಾರವು ಸ್ತ್ರೀಯರ ನಿರ್ಮಿತಿ ಶಕ್ತಿಗೆ ಸಂಬಂಧಿಸಿರುವುದರಿಂದ ತನ್ನ ನಿರ್ಮಿತಿಯ ಕಾರ್ಯವನ್ನು ಯಾವಾಗಲೂ ಜಾಗೃತ ಸ್ಥಿತಿಯಲ್ಲಿಡುತ್ತದೆ. ಆದುದರಿಂದ ಸ್ತ್ರೀಯರ ‘ಪ್ರೇಮಿಸುವ ಮೂಲಭಾವವು ಸ್ಥಿರವಾಗಿ ಉಳಿದುಕೊಳ್ಳುತ್ತದೆ. ಮಂಗಳಸೂತ್ರದ ಗೋಲಮಂಡಲದ ಮಧ್ಯದಲ್ಲಿ ತಯಾರಾಗುವ ಲಂಬಗೋಲಾಕಾರವು ಶ್ರೀವಿಷ್ಣುವಿನ ಅಪ್ರಕಟ ಕ್ರಿಯಾಶಕ್ತಿಗೆ ಸಂಬಂಧಿಸಿರುವುದರಿಂದ ಸುಷುಮ್ನಾನಾಡಿಯನ್ನು ಜಾಗೃತ ಗೊಳಿಸುತ್ತದೆ:

  ಉಂಗುರವನ್ನು ಏಕೆ ಧರಿಸಬೇಕು? ಹೇಗೆ ಧರಿಸಬೇಕು ? ಏನು ಲಾಭ ?

ಮಂಗಳಸೂತ್ರದ ಗೋಲಮಂಡಲದ ಮಧ್ಯದಲ್ಲಿ ನಿರ್ಮಾಣವಾಗುವ ಲಂಬಗೋಲಾ ಕಾರವು ಶ್ರೀವಿಷ್ಣುವಿನ ಅಪ್ರಕಟ ಕ್ರಿಯಾಶಕ್ತಿಗೆ ಸಂಬಂಧಿಸಿದೆ. ಈ ಆಕಾರವು ಸ್ತ್ರೀಯರಿಗೆ ನಿರ್ಗುಣ ಸ್ತರದಲ್ಲಿನ ಈಶ್ವರನ ಸ್ಪಂದನಗಳನ್ನು ಗ್ರಹಿಸಲು ಉಪಯೋಗವಾಗುತ್ತದೆ, ಅಲ್ಲದೇ ಅದು ಸುಷುಮ್ನಾ ನಾಡಿಯನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುವುದರಿಂದ ಸ್ತ್ರೀರೂಪೀ ಪ್ರಕೃತಿಗೆ ಪುರುಷಸ್ವರೂಪಿ ಶಿವನಲ್ಲಿ ಏಕರೂಪವಾಗಲು ಸಹಾಯವಾಗಿ ಸ್ತ್ರೀಯು ಬೇಗನೇ ಮಾಯೆಯಿಂದ ಮುಕ್ತಳಾಗುತ್ತಾಳೆ.

ಮಂಗಳಸೂತ್ರದಲ್ಲಿ ಪತಿಯ ಇಚ್ಛೆಗೆ ಸಂಬಂಧಿಸಿದ ಲಹರಿಗಳು ಸಿಲುಕಿಕೊಂಡಿರುವುದರಿಂದ, ಪತಿಯ ನಿಧನದ ನಂತರ ಸ್ತ್ರೀಯರು ಮಂಗಳಸೂತ್ರವನ್ನು ಧರಿಸಿದರೆ ಪತಿಯ ಲಿಂಗದೇಹವು ಭುವರ್ಲೋಕದಲ್ಲಿ ಸಿಲುಕುವ ಸಾಧ್ಯತೆಯಿರುತ್ತದೆ

ಮಂಗಳಸೂತ್ರವನ್ನು ಪತಿಯ ಅನುಮತಿಯಿಂದ ಮತ್ತು ಅವನ ಕೈಯಿಂದ ಸ್ತ್ರೀಯರ ಕೊರಳಿನಲ್ಲಿ ಕಟ್ಟಿರುವುದರಿಂದ ಮಂಗಳಸೂತ್ರದಲ್ಲಿ ಪತಿಯ ಇಚ್ಛೆಗೆ ಸಂಬಂಧಿಸಿದ ಲಹರಿಗಳು ಸಂಗ್ರಹವಾಗಿರುತ್ತವೆ. ಪತಿಯ ನಿಧನದ ನಂತರವೂ ಸ್ತ್ರೀಯು ‘ಫ್ಯಾಶನ್’ ಎಂದು ಮಂಗಳಸೂತ್ರವನ್ನು ಧರಿಸಿದರೆ ಆ ಸ್ಪಂದನಗಳಿಂದಾಗಿ ಅವಳ ಪತಿಯ ಲಿಂಗದೇಹವು ಭೂಮಂಡಲದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿರುತ್ತದೆ. ಮಂಗಳಸೂತ್ರವನ್ನು ನೋಡಿದಾಗ ಸ್ತ್ರೀಯರಿಗೆ ಪತಿಯ ನೆನಪಾಗುವುದರಿಂದ ಪತಿಯು ಮತ್ತೆ ಭೂಲೋಕಕ್ಕೆ ಬರಬೇಕಾಗುತ್ತದೆ. ಇದರಿಂದ ಪತಿಯ ಲಿಂಗದೇಹಕ್ಕೆ ಗತಿಸಿಗಲು (ಮುಕ್ತಿಯು) ಅಡಚಣೆಗಳು ನಿರ್ಮಾಣ ವಾಗುತ್ತವೆ.

  ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ?

ಇಂದಿನ ಬುದ್ಧಿವಾದಿ ಸ್ತ್ರೀಯರು ಪತಿಯ ನಿಧನದ ನಂತರವೂ ‘ಪತಿಯು ತೀರಿಕೊಂಡರೆ ಏನಾಯಿತು ಎಂದು ಮಂಗಳ ಸೂತ್ರವನ್ನು ಧರಿಸುತ್ತಾರೆ. ಈ ಕೃತಿಯಿಂದ ಅವರ ತೀರಿಹೋದ ಪತಿಗೆ ಮತ್ತು ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಗುತ್ತದೆ. ಆದುದರಿಂದ ‘ಹಿಂದೂ ಧರ್ಮವು ಹಾಕಿಕೊಟ್ಟ ವಿಧಿವತ್ತಾದ (ಶಾಸ್ತ್ರೋಕ್ತ) ಸಂಸ್ಕಾರಗಳನ್ನು ಪಾಲಿಸುವುದರಲ್ಲಿಯೇ ನಮ್ಮ ಕಲ್ಯಾಣವಿದೆ ಎಂಬುದನ್ನು ತಿಳಿದುಕೊಂಡು ಧರ್ಮದ ಮುಂದೆ ನಮ್ಮ ಬುದ್ಧಿಯನ್ನು ಉಪಯೋಗಿಸದೇ ಕಟ್ಟುನಿಟ್ಟಾಗಿ ಧರ್ಮಪಾಲನೆಯನ್ನು ಮಾಡಬೇಕು.

Leave a Reply

Your email address will not be published. Required fields are marked *

Translate »