ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಷ್ಟ ಲಕ್ಷ್ಮಿ ಸ್ತೋತ್ರ ಮಂತ್ರದ ಅರ್ಥ

ಅಷ್ಟ ಲಕ್ಷ್ಮಿ ಸ್ತೋತ್ರ

ಈ ಸ್ತೋತ್ರ ನೀವು ಜಪಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆ ಇದ್ದರು ಅದು ನಿಮಗೆ ಸಾಕಷ್ಟು ನಿವಾರಣೆ ಆಗುತ್ತದೆ ಹಾಗೆ ನಿಮಗೆ ಆರ್ಥಿಕ ಪರಿಸ್ಥಿತಿ ಯಾವುದೇ ತೊಂದರೆ ಇರಲಿ ಅದು ನಿಮಗೆ ಖರ್ಚು ಆಗಿರಲಿ ಅಥವಾ ಏನೇ ತೊಂದರೆ ಇರಲಿ ಅದೆಲ್ಲ ನಿಮಗೆ ನಿವಾರಣೆ ಆಗುತ್ತದೆ ಎಂದು ಹೇಳಬಹುದು

ಈ ಮಂತ್ರ ಹೀಗಿದೆ ಲಕ್ಷ್ಮಿ ಕ್ಷೀರ ಸಮುದ್ರ ನಾಚ ತನಯ ಶ್ರೀ ರಂಗಧಾಮೇಶ್ವರಿ ದಾಸಿಭೂತ ಸಮಸ್ತ ದೇವಹಿತ ಲೋಕೈಕ ದೀಪಾಕುರ ಶ್ರೀಮಾನ್ ಮಂದ ಕುರ ಕಟಾಕ್ಷ ಲಬ್ಧ ವಿದಾವಂ ಧರ್ಮೇಂದ್ರ ಗಂಗಾಧರ ಟ್ರೈಲೋಕ್ಯ ಕುಟುಂಬಿನಿ ಸರಸಿಜಾಹ ಒಂದೇ ಮುಕುಂದ ಪ್ರಿಯ

ಈ ಸ್ತೋತ್ರ ಈ ರೀತಿ ಆಗಿ ಇದೆ ಇದರ ಅರ್ಥ ಏನು ಎಂದರೆ ಕ್ಷೀರ ಸಮುದ್ರ ರಾಜನ ಮಗಳಾಗಿ ಕ್ಷೀರ ರಂಗನಾಥನ ಪತ್ನಿ ಆಗಿ ಸಮುದ್ರ ಲೋಕದ ಎಲ್ಲ ಜನರಿಂದಲೂ ಪೂಜಿತವಾಗಿಬ್ರಹ್ಮ ಶಿವ ಇಂದ್ರಾದಿಗಳಿಂದ ಪೂಜಿತಲ್ಪಟ್ಟು ಎಲ್ಲರಿಗೂ ಕರುಣಾ ಕಟಾಕ್ಷ ತೋರಿಸುತ್ತಾ ಸಕಲ ಲೋಕ ಜನ ಧನಿಯಾದ ಪದ್ಮಗಳ ಮಧ್ಯೆ ಜನಿಸಿ ಬಂದ ಶ್ರೀ ಲಕ್ಷ್ಮೀ ದೇವಿಯನ್ನು ನಾನು ವಂದಿಸುವೆನು ಈ ಮಂತ್ರದ ಅರ್ಥ ಇದಾಗಿದೆ.

ಯಾವುದಾದರೂ ಶುಕ್ರವಾರ ಈ ಮಂತ್ರವನ್ನು ಹೇಳಿ ತಾವರೆ ಹೂವನ್ನು ನೀವು ಪೂಜೆ ಮಾಡಬೇಕು ತಾವರೆ ಹೂವನ್ನು ಪೂಜೆ ಮಾಡಿದ ನಂತರ ತಾಂಬೂಲ ಸಹಿತ ಈ ತಾವರೆ ಹೂವನ್ನು ಯಾರಿಗಾದರೂ ದಾನ ಮಾಡಬೇಕು ಈ ಮಂತ್ರ ಹೇಳಿ ಈ ಚಿಕ್ಕ ಉಪಾಯ ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ.

  ಆದಿ ಶಂಕರಾಚಾರ್ಯ ವಿರಚಿತ "ಭಜ ಗೋವಿಂದಂ" ಗದ್ಯಾರ್ಥ ಸಹಿತ..!

ಅದು ಕೇವಲ ಆರ್ಥಿಕ ಪರಿಸ್ಥಿತಿ ಗೆ ಸಂಬಂಧ ಪಟ್ಟ ವಿಷಯ ಮಂತ್ರ ಇದಾಗಿದೆ ಹಾಗಾಗಿ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಏನೇ ತೊಂದರೆ ಇದ್ದರು ಏನೇ ಖರ್ಚು ಇದ್ದರೂ ಇಂತಹ ಯಾವುದೇ ಒಂದು ತೊಂದರೆ ಇರಲಿ ನಿಮಗೆ ಸಾಕಷ್ಟು ಸುಧಾರಿಸುತ್ತದೆ ಎಂದು ಹೇಳಬಹುದು ಆದಷ್ಟು ಬೇಗ ನಿಮಗೆ ಇದರ ಫಲಿತಾಂಶ ಗೊತ್ತಾಗುತ್ತದೆ.

ಈ ಮಂತ್ರವನ್ನು ನೀವು ಪ್ರತಿ ದಿನ ಕನಿಷ್ಟ ಒಮ್ಮೆ ಆದರೂ ಹೇಳಿಕೊಂಡರೆ ನಿಮಗೆ ಖಂಡಿತವಾಗಿ ಆರೋಗ್ಯ ಭಾಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ

ಎಲ್ಲವೂ ಸಿಗುವುದು ಅಲ್ಲದೆ ನೀವು ಖಂಡಿತವಾಗಿ ಎಲ್ಲಾ ವಿಷಯದಲ್ಲೂ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಲಾಭವನ್ನು ಪಡೆಯುವಿರಿ ಇದರಲ್ಲಿ ಖಂಡಿತವಾಗಿ ಯಾವುದೇ ಸಂಶಯ ಇಲ್ಲ ಎಂದು ಹೇಳಬಹುದು ನೀವು ಕೂಡ ಇದರ ಸಂಪೂರ್ಣ ಉಪಯೋಗವನ್ನು ಪಡೆಯಿರಿ ಇದರ ಜೊತೆಗೆ ನಿಮ್ಮ ಕುಟುಂಬದವರ ರಕ್ಷಣೆ ಕೂಡ ಆಗಲಿದೆ.

ಅಷ್ಟ ಲಕ್ಷ್ಮೀ ಸ್ತೋತ್ರಂ

ಆದಿಲಕ್ಷ್ಮಿ
ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ ।
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ ॥ 1 ॥

  ಗ್ರಾಮದೇವತೆ ಮಹಿಮೆ, ಮಂತ್ರ, ಅನುಗ್ರಹ

ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ ।
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ॥ 2 ॥

ಧೈರ್ಯಲಕ್ಷ್ಮಿ
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ ।
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ॥ 3 ॥

ಗಜಲಕ್ಷ್ಮಿ
ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ ।
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ॥ 4 ॥


ಸಂತಾನಲಕ್ಷ್ಮಿ
ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ ।
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ॥ 5 ॥

ವಿಜಯಲಕ್ಷ್ಮಿ
ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ।
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ ॥ 6 ॥

  ಅಮೃತಸಂಜೀವನ ಧನ್ವಂತರಿ ಸ್ತೋತ್ರ

ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ।
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ॥ 7 ॥

ಧನಲಕ್ಷ್ಮಿ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ ।
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ॥ 8 ॥

ಫಲಶೃತಿ
ಶ್ಲೋ॥ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ।
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ॥

ಶ್ಲೋ॥ ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ।
ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ॥

▬▬▬ஜ۩۞۩ஜ▬▬▬▬▬▬ஜ۩۞۩ஜ▬▬

ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »