ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?

ಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?

ಪುರೋಹಿತ ಎನ್ನುವ ಪದ ನಿರ್ದಿಷ್ಟ ಸಮುದಾಯವನ್ನು ಸೂಚಿಸುವಂಥದಲ್ಲ. ಇದೊಂದು ಉಪಾಧಿ. ಇದೊಂದು ಗುರುತು. ಪ್ರಾಚೀನ ಗ್ರಂಥಗಳಲ್ಲಿ ವೇದಮಂತ್ರಗಳಲ್ಲಿ ಇದಕ್ಕೆ ಏನು ಅರ್ಥಕೊಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ… |

ವಾಚಸ್ಪತ್ಯಮ್ : ಪುರೋ ಧೀಯತೇಽಸೌ ಧಾಕ್ತ |
ಪುರಃ ಧೀಯತೇ :- ಪುರಃ ಎಂಬ ಪದಕ್ಕೆ ಮುಖ್ಯಾರ್ಥ ದೇಹ. ಧೀಯತೇ ಎಂದರೇ ದೇಹಕ್ಕೆ ಚೈತನ್ಯಪ್ರಾಯವಾಗಿ ಯಾವುದು ಇರುವುದೋ ಅದು. ಆದ್ದರಿಂದ ಚೈತನ್ಯಯುಕ್ತವಾದ ದೇಹವನ್ನು ಸಾಧನಾರೂಪದಿಂದ ಉಪಯೋಗಿಸಿಕೊಂಡು ಅಭ್ಯುದಯ ನಿಶ್ರೇಯಸ ಮಾರ್ಗವನ್ನು ತೋರಿಸಿಕೊಡುವನೋ ಅವನೇ ಪುರೋಹಿತ.

ದೇವಕೃತ್ಯಾದೌ ಅಗ್ರೇ ಧಾರ್ಯ್ಯೇ | ಪುರೋಧಸಿ ತಞ್ಜಕ್ಷಣಂ | ಯಥಾ
“ಪುರೋಹಿತೋ ಹಿತೋ ವೇದಸ್ಮೃತಿಜ್ಞಃ ಸತ್ಯವಾಕ್ ಶುಚಿಃ | ಬ್ರಹ್ಮಣ್ಯೋ ವಿಮಲಾಚಾರಃ ಪ್ರತಿಕರ್ತ್ತಾಽಽಪದಾಮೃಜುಃ” | “ವೇದವೇದಾಙ್ಗ ತತ್ತ್ವಜ್ಞೋ ಜಪಹೋಮಪರಾಯಣಃ |ಇತಿ ಕವಿಕಲ್ಪಲತಾಯಾಂ ಚಾಣಕ್ಯಃ ||

ದೇವತಾಕಾರ್ಯಗಳಲ್ಲಿ ಮಂಚೂಣಿಯಲ್ಲಿ ನಿಂತು ವಿಧಿಪೂರ್ವಕವಾಗಿ ಶಾಸ್ತ್ರಕರ್ಮಗಳನ್ನು ನಡೆಸುವವನೇ ಪುರೋಹಿತ .ಅರ್ಥಾತ್ ಯಜಮಾನನು ಸ್ವರ್ಗಲೋಕ ಕಾಮ್ಯನಾದರೇ ಜ್ಯೋತಿಷ್ಟೋಮ ಯಜ್ಞವನ್ನೂ , ಗೋವುಗಳೇ ಮುಂತಾದ ಪಶುಗಳನ್ನು ಪಡೆಯುವ ಇಚ್ಛೆಯಿದ್ದರೇ ಚಿತ್ತಿ ಎಂಬ ಯಜ್ಞವನ್ನೂ ಹಾಗೂ ಮುಂತಾದ ಇಹಪರಲೋಕ ಕಾಮ್ಯಗಳನ್ನು ಇಟ್ಟುಕೊಂಡವನು ಆಯಾ ದೇವತೆಗಳ ಆರಾಧನೆಯನ್ನು ಯಜ್ಞಯಾಗಾದಿಗಳ ಮೂಲಕವೇ ಪಡೆದುಕೊಳ್ಳಬೇಕು. ಇಂಥ ಕಾಮ್ಯಕರ್ಮಗಳಲ್ಲಿ ಸತ್ಯವಾಚಿಯಾದ, ಅಂತಃಕರಣಶುದ್ಧಿಯುಳ್ಳ , ವೇದಗಳನ್ನೂ ಧರ್ಮಸೂತ್ರಗೃಹ್ಯಸೂತ್ರಗಳನ್ನೂ ಆಮೂಲಾಗ್ರ ಅಧ್ಯಯನದಿಂದ ಮನನಮಾಡಿಕೊಂಡ, ಸದಾಚಾರವುಳ್ಳ ,ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪರೋಪಕಾರ ಹಾಗೂ ಋಜುಮಾರ್ಗದಲ್ಲಿಯೇ ನಿರತನಾಗಿರುವ, ವೇದಗಳನ್ನೂ ವೇದಾಂಗಗಳ ಮೂಲತತ್ತ್ವವನ್ನೂ ತಪಸ್ಸಿನಿಂದ ತಿಳಿದುಕೊಂಡಂಥ ಯಾವಾತನು ತಾನೇ ಮಂಚೂಣಿಯಲ್ಲಿ ನಿಂತು ವಿಧಿಪೂರ್ವಕವಾಗಿ ಶಾಸ್ತ್ರಕರ್ಮಗಳನ್ನು ಯಜಮಾನನ ಅಭ್ಯುದಯದಕ್ಕಾಗಿ ನಡೆಸಿಕೊಡುವನೋ ಅವನೇ ಪುರೋಹಿತ ಎನಿಸಿಕೊಳ್ಳುತ್ತಾನೆ ಎಂಬುದಾಗಿ ಚಾಣಕ್ಯನು ತನ್ನ ಕವಿಕಪಲತಾ ಎಂಬ ಗ್ರಂಥದಲ್ಲಿ ಹೇಳಿದ್ದಾನೆ.

  ಮಂತ್ರಾಲಯದ ಪಂಚಮುಖಿ ಆಂಜನೇಯ ದೇವಸ್ಥಾನ..!

ಆಶೀರ್ವಾದವಚೋಯುಕ್ತ ಏವ ರಾಜಪುರೋಹಿತಃ” | ತಸ್ಮಾತ್ ಧರ್ಮಪ್ರಧಾನಾತ್ಮಾ ವೇದಧರ್ಮವಿದೀಪ್ಸಿತಃ || ಬೋಧಾಯನ ಧರ್ಮ ಸಂಹಿತಾ || ೧೬.೦೨ ||

ಈ ರೀತಿಯಾಗಿ ವೇದಗಳು ಸಾರುತ್ತಿರುವ ಧರ್ಮವನ್ನೇ ಸದಾಕಾಲಕ್ಕೂ ಚಿಂತಿಸುತ್ತಿರುವ, ಸಮಸ್ತ ಪ್ರಜೆಗಳ ಅವರನ್ನಾಳುವ ರಾಜರುಗಳ ಒಳಿತನ್ನು ಅನವರತ ಯೋಚಿಸುವವನೇ ರಾಜಪುರೋಹಿತ.

ಬ್ರಾಹ್ಮಣೋ ಗುಣವಾನ್ ಕಞ್ಚಿತ್ ಪುರೋಧಾಃ ಪ್ರತಿದೃಶ್ಯತಾಮ್ | ಧರ್ಮಾತ್ಮಾ ಮನ್ತ್ರವಿದ್ಯೇಷಾಂ ರಾಜ್ಞಾಂ ರಾಜನ್ | ರಾಜ್ಞಾಂ ಪುರೋಹಿತಾಧೀನಃ ವಿಜಯಾದಿಃ ತತ್ರೋಕ್ತೋ ದೃಶ್ಯಃ | ಪುರೋಹಿತಃ || ಬೋಧಾಯನ ಧರ್ಮ ಸಂಹಿತಾ || ೧೬.೦೩ ||

ಮೇಲೆ ಹೇಳಿದಂಥಾ ಸಕಲ ಗುಣವಂತನಾದ , ಮಂತ್ರವಿದ್ಯೆಗಳನ್ನು ತಿಳಿದುಕೊಂಡು ತಾನೂ ಧರ್ಮಾತ್ಮನಾಗಿ, ರಾಜರನ್ನೂ ಪ್ರಜೆಗಳನ್ನೂ ಧರ್ಮಮಾರ್ಗದಲ್ಲಿ ಕರೆದೊಯ್ಯುವ ಬ್ರಾಹ್ಮಣನಿಂದಲೇ ಪುನಃ ಪುನಃ ಸತ್ಕಾರ್ಯಗಳನ್ನು ಯಜಮಾನನು ಮಾಡಿಸಿಕೊಳ್ಳಬೇಕು. ಅರ್ಥಾತ್ ಈ ಸಂದರ್ಭದಲ್ಲಿ ಪುರೋಧಾ ಎಂಬ ಪದಕ್ಕೆ “ಕುಲಪುರೋಹಿತ ಅಥವಾ ಆಸ್ಥಾನ ರಾಜಪುರೋಹಿತ ಎಂಬುದಾಗಿ ವಾಚಸ್ಪತ್ಯಾಚಾರ್ಯರು ನಿರ್ವಚನ ಮಾಡಿದ್ದಾರೆ. ಇದಲ್ಲದೇ ಇಂಥ ಗುಣವಂತನಾದ ಬ್ರಾಹ್ಮಣನ ಮಾರ್ಗದರ್ಶನದಲ್ಲಿಯೇ ರಾಜರುಗಳ ಜಯಾಪಜಯ ಹಾಗೂ ಇತರ ಆಗುಹೋಗುಗಳನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಹೀಗೆ ಬೋಧಾಯನಾಚಾರ್ಯರು ಹೇಳಿದ್ದಾರೆ.

  ಭಗವಾನ್ ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ?

ಅಗ್ನಿಪುಂ “ತ್ರಯ್ಯಾಞ್ಚ ದಣ್ಡನೀತ್ಯಾಂ ಚ ಕುಶಲಃ ಸ್ಯಾತ್ ಪುರೋಹಿತಃ |
ವೇದತ್ರಯಗಳನ್ನೂ , ರಾಜ್ಯಭಾರ, ಶಾಸನಾದಿ ದಂಡನೀತಿಗಳನ್ನೂ ಪರಿಣಿತನಾದವನೇ ಪುರೋಹಿತನೆಂಬುದಾಗಿ ಅಗ್ನಿಪುರಾಣದಲ್ಲಿ ಹೇಳಿದೆ.

ಪುರೋಹಿತಸ್ಯ ಧರ್ಮ್ಯಂ ಸಹಿಷ್ಯಾಂ | ಇತಿ ಚ ಪುರೋಹಿತಧರ್ಮ್ಯೇ |
ಆತ್ಯಂತಿಕವಾದ ಸಹಿಷ್ಣುತತೆಯೇ ಪುರೋಹಿತನ ಆದ್ಯ ಧರ್ಮ ಎಂಬುದಾಗಿ ಪುರೋಹಿತ ಧರ್ಮದಲ್ಲಿ ಹೇಳಿದೆ.

ಶಬ್ದಕಲ್ಪದ್ರುಮ ಹೇಳುವಂತೆ :
ಪುರೋ ದೃಷ್ಟಾದೃಷ್ಟಫಲೇಷು ಕರ್ಮ್ಮಸು ಧೀಯತೇ ಆರೋಪ್ಯತೇ ಯಃ |ಕುಮಾರಿಲ ಭಟ್ಟಃಟುಪ್ಟೀಕಾ ||
ನಿತ್ಯನೈಮಿತ್ತಿಕ ಹಾಗೂ ಕಾಮ್ಯಕರ್ಮಗಳ ದೃಷ್ಟ ಮತ್ತು ಅದೃಷ್ಟ ಫಲಗಳನ್ನು ಆಯಾಕರ್ಮಗಳಿಗನುಗುಣವಾಗಿ ಯಾವಾತನು ತಿಳಿಸಿಕೊಡುತ್ತಾನೋ ಅವನೇ ಪುರೋಹಿತ ಎಂಬುದಾಗಿ ಮೀಮಾಂಸಾ ದಿಗ್ಗಜರಾದ ಕುಮಾರಿಲ ಭಟ್ಟರು ಹೇಳಿದ್ದಾರೆ.

ರಕ್ಷೇತಾಂ ನೃಪತಿಂ ನಿತ್ಯಂ ಯತ್ನಾದ್ವೈದ್ಯಪುರೋಹಿತೌ || ಇತಿ ಸುಶ್ರುತೇ ಸೂತ್ರಸ್ಥಾನೇ ಚತುಸ್ತ್ರಿಂಶೇಽಧ್ಯಾಯೇ ||
ಯಾವಾತನು ವೈದ್ಯಶಾಸ್ತ್ರದಲ್ಲಿ ನುರಿತನಾದವನೋ, ತನ್ನ ಚಿಕಿತ್ಸೆಯಿಂದ ಪ್ರಜೆಗಳ ಹಾಗೂ ರಾಜರುಗಳ “ಪುರ” ಅರ್ಥಾತ್ ದೇಹದ ಆರೋಗ್ಯವನ್ನು ಕಾಪಾಡುತ್ತಾನೋ ಅಂಥ ವೈದ್ಯನೂ ಪುರೋಹಿತನೇ. ಹೀಗೆಂದು ಸುಶೃತಮಹರ್ಷಿಯು ತನ್ನ ಆಯುರ್ವೇದ ಸೂತ್ರಗಳಲ್ಲಿ ಹೇಳಿದ್ದಾನೆ.

  ಅಜ್ಜಿಕಾನು ಶ್ರೀರಾಜರಾಜೇಶ್ವರಿ ದೇವಸ್ಥಾನ

ಹೀಗೆ ಪುರೋಹಿತ ಪದವು ವಿಸ್ತೃತ ವ್ಯಾಖ್ಯಾನ ಹೊಂದಿದ್ದು, ಪ್ರತಿಯೊಂದು ಧರ್ಮದಲ್ಲೂ ಈ ಕರ್ತವ್ಯಗಳನ್ನು ನಿರ್ವಹಿಸುವವರನ್ನು ಆಯಾ ದೇಶಭಾಷೆಗಳಲ್ಲಿ ಪುರೋಹಿತರೆಂದೇ ಕರೆಯಲಾಗಿದೆ.

ಪ್ರಜೆಗಳನ್ನು ಪ್ರೀತಿಯಿಂದ ಪರಿಪಾಲಿಸಬೇಕಾದ ರಾಜ ತನ್ನ ಕರ್ತವ್ಯವನ್ನು ಉಪೇಕ್ಷಿಸಿ ದಬ್ಬಾಳಿಕೆ ನಡೆಸಿದರೆ ಅದನ್ನು ‘ಸರ್ವಾಧಿಕಾರ’ ಎಂದು ಕರೆಯಲಾಗುತ್ತದೆ. ಹಾಗೆಯೇ, ಪುರೋಹಿತ ವರ್ಗ ತನ್ನ ಕರ್ತವ್ಯವಾದ ಸಕಲ ಜನಹಿತದ ವಿಶಾಲ ಮನೋಭಾವ ಬಿಟ್ಟು ಪಕ್ಷಪಾತ ಮತ್ತು ಹೇರಿಕೆಯ ಧೋರಣೆ ತೋರಿದರೆ ಅದನ್ನು ‘ಪುರೋಹಿತಶಾಹಿ’ ಎಂದು ಕರೆಯುವ ರೂಢಿ ಇದೆ.
ಸತ್ಯಪ್ರಕಾಶ

ಶಿವಾರ್ಪಣಮಸ್ತು
ಸದ್ವಿಚಾರ ತರಂಗಿಣಿ

Leave a Reply

Your email address will not be published. Required fields are marked *

Translate »