ಒಮ್ಮೆ ಶಂಕರಾಚಾರ್ಯರು ತಮ್ಮ ಸಣ್ಣ ಗುಡಿಸಿಲಿನ ಹೊರಗಿನ ಬೀದಿ ದೀಪದ ಬೆಳಕಿನಲ್ಲಿ ಏನನ್ನೂ ಹುಡುಕುತ್ತಿದ್ದರು.
ಬಿಕ್ಷೆಗಾಗಿ ಹೊರಗೆ ಹೋಗಿದ ಅವರ ಶಿಷ್ಯ ಬಂದು ಗುರುಗಳು ಹುಡುಕುವುದನನ್ನು ನೋಡಿ ಕೇಳಿದ – ಗುರುಗಳೆ, ಏನನ್ನು ಈ ಬೀದಿ ದೀಪದ ಬೆಳಕಿನಲ್ಲಿ ಹುಡುಕಾಟ ಮಾಡುತ್ತಿರುವಿರಿ?
ಒಂದು ಸೂಜಿ ಕೆಳೆದು ಹೋಗಿದೆ ಅದು ಈ ಬೀದಿ ದೀಪದ ಬೆಳಕಿನಲ್ಲಿ ಸಿಗಬಹುದೆ ಎಂದು ಹುಡುಕುತ್ತಿದ್ದನೆ ಎಂದರು.
ಅದಕ್ಕೆ ಶಿಷ್ಯ ಕೇಳಿದೆ, ತಾವು ಸೂಜಿಯನ್ನು ಯಾವ ಜಾಗದಲ್ಲಿ ಕಳೆದುಕೊಂಡಿರೆಂದು ಜ್ಞಾಪಕವಿದೆಯೇ?
ಹೌದು ನಾನು ಗುಡಿಸಲಿನಲ್ಲಿ ನನ್ನ ಹಾಸಿಗೆ ಮೇಲೆ ಕಳೆದುಕೊಂಡೆ.
ಶಿಷ್ಯನಿಗೆ ಆಶ್ಚರ್ಯವಾಯಿತು, ಗುರುಗಳೆ ನೀವೇ ಹೇಳುತ್ತೀರಿ ಆ ಸೂಜಿಯನ್ನು ಗುಡಿಸಲಿನಲ್ಲಿ ಕಳೆದುಕೊಂಡೆ ಎಂದು, ಆದರೆ ಇಲ್ಲೆಕೆ ಹುಡುಕ್ಕುತ್ತೀರಿ?
ಶಂಕರಾಚಾರ್ಯರು ಮುಗ್ಧತೆಯಿಂದ ಹೇಳಿದರು, ಗುಡಿಸಲಿನಲ್ಲಿ ಇರುವ ದೀಪದ ಎಣ್ಣೆ ಕಾಲಿಯಾಗಿದೆ, ಅಲ್ಲಿ ತುಂಬಾ ಕತ್ತಲೆಯಿದೆ, ಆದ್ದರಿಂದ ಹೊರಗಡೆ ಸಾಕಷ್ಟು ಬೀದಿ ದೀಪದ ಬೆಳಕಿರುವುದರಿಂದ ಇಲ್ಲಿ ಹುಡುಕುತ್ತಿದ್ದೇನೆ ಎಂದರು.
ಶಿಷ್ಯ ತನ್ನ ನಗುವನ್ನು ಹಾಗೆ ತಡೆದು ಹೇಳಿದ ಗುರುಗಳೆ, ನೀವು ನಿಮ್ಮ ಸೂಜಿಯನ್ನು ಗುಡಿಸಿಲಿನ ಒಳಗೆ ಕಳೆದುಕೊಂಡರೆ ಅದು ಹೊರಗೆ ಸಿಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀರಿ?
ಶಂಕರಾಚಾರ್ಯರು ತಮ್ಮ ಮಂದಸ್ಮಿತ ನಗುವಿನಿಂದ ತಮ್ಮ ಶಿಷ್ಯನಿಗೆ ಹೇಳಿದರು, “ನಾವೇಲ್ಲರೂ ಹೀಗೆತಾನೆ ಮಾಡೋದು?” ನಮ್ಮಲಿರುವುದನ್ನು ಕಳೆದುಕೊಂಡೆವು ಎಂದು ಭಾವಿಸಿ ಅದನ್ನು ದೇವಸ್ಥಾನಗಳಲ್ಲಿ ಹುಡುಕಲು ನೂರಾರು ಮೈಲಿಗಳು ಓಡಾಡುತ್ತೇವೆ, ಬೆಟ್ಟು-ಗುಡ್ಡ ಏರುತ್ತೇವೆ ಏಕೆ? ಏಕೆಂದರೆ, ನಮ್ಮೊಳಗೆ ಸಂಪೂರ್ಣ ಕತ್ತಲು ಆವರಿಸಿದೆ.
ನಾವು ಎಂಥ ದಡ್ಡರಲ್ಲವೆ!!
ನಮ್ಮೊಳಗೆ ಆವರಿಸಿರುವ ಕತ್ತಲನ್ನು ಓಡಿಸಿ ನಾವು ಕಳೆದುಕೊಂಡಿರುವೆವು ಎಂಬ ಖಜಾನೆಯನ್ನು ನಮ್ಮಲ್ಲೇ ಕಾಣಲು “ದೀಪವನ್ನು” ಹಚ್ಚಬೇಕು.
🙏🙏🙏