ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಕ್ಬರ್ ಮತ್ತು ಬೀರಬಲ್ ನ ಕಥೆ – ಅವಿದ್ಯಾ

ಅವಿದ್ಯಾ

  ಒಮ್ಮೆ ಅಕ್ಬರ್ ಬೀರ್ಬಲ್ ಗೆ, ಈ “ಅವಿದ್ಯಾ” ಏನು?? ಎಂದು ಕೇಳಿದನು.

ನೀವು ನನಗೆ 4 ದಿನಗಳ ರಜೆ ನೀಡಿ ಮತ್ತು ನಂತರ ನಾನು ನಿಮಗೆ ಹೇಳುತ್ತೇನೆ ಎಂದು ಬೀರ್ಬಲ್ ಹೇಳಿದ!

ಅಕ್ಬರ್ ಇದಕ್ಕೆ ಸಮ್ಮತಿಸಿ ನಾಲ್ಕು ದಿನಗಳ ರಜೆ ನೀಡಿದ!
 
ಬೀರ್ಬಲ್ ಚಮ್ಮಾರನ ಬಳಿಗೆ ಹೋಗಿ ಒಂದು ಜೊತೆ ಚಪ್ಪಲಿಯನ್ನು ಹೊಲಿದು ಕೊಡಲು ಹೇಳಿದ. ಅದಕ್ಕೆ, ಚಮ್ಮಾರ ಅಳತೆಯನ್ನು ಕೇಳಿದ
ಬೀರ್ಬಲ್, “ಅಪ್ಪಾ, ಈ ಅಳತೆ ಗಿಳತೆ ಏನೂ ಇಲ್ಲ. ಒಂದೂವರೆ ಅಡಿ ಉದ್ದ ಮತ್ತು ಸ್ವಲ್ಪ ಜಾಸ್ತಿ ಅಗಲ ಇರೋ ಚಪ್ಪಲಿಗಳನ್ನು ಹೊಲಿ. ಹಾಂ!! ಅದಕ್ಕೆ ವಜ್ರ ರತ್ನಗಳನ್ನು ಸೇರಿಸಿ ಚಿನ್ನ ಮತ್ತು ಬೆಳ್ಳಿಯ ತಂತಿಯೊಂದಿಗೆ ಹೊಲಿ. ಅವಕ್ಕೆ ನೀನು ಕೇಳಿದಷ್ಟು ಹಣವನ್ನು ಪಡೆಯುವೆ ಚಿಂತಿಸಬೇಡ ಎಂದ.

ಅದಕ್ಕೆ ಚಮ್ಮಾರ
ಆಯ್ತು, ಬುದ್ಧೀ!! ಇನ್ನು ಮೂರುದಿನ ಬಿಟ್ಟು ತೆಗೆದುಕೊಳ್ಳಿ ಎಂದ.

  ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಮಹತ್ವ

ಮೂರನೆಯ ದಿನ, ಚಪ್ಪಲಿಗಳನ್ನು ಚಮ್ಮಾರನಿಂದ ಪಡೆಯುವ ಮೊದಲು, ಯಾವುದೇ ಪರಿಸ್ಥಿತಿಯಲ್ಲೂ ಚಪ್ಪಲಿಯನ್ನು ತಾನು ಮಾಡಿದ್ದಾಗಿ ಯಾರಿಗೂ ಹೇಳಬಾರದೆಂದು ಪ್ರಮಾಣವಚನವನ್ನು ಪಡೆದ.

ಈಗ ಬಿರ್ಬಲ್ ತನ್ನೊಂದಿಗೆ ಒಂದು ಚಪ್ಪಲಿ ಇಟ್ಟುಕೊಂಡು ಮತ್ತೊಂದನ್ನು ಮಸೀದಿಯೊಳಗೆ ಎಸೆದ. ಮೌಲ್ವಿ ನಮಾಜ್ ಪಠಿಸಲು ಮಸೀದಿಗೆ ಹೋದಾಗ ಅಲ್ಲಿ ಆ ಚಪ್ಪಲಿಯನ್ನು ನೋಡಿದ.

ಇಷ್ಟು ದೊಡ್ಡ ಚಪ್ಪಲಿ ಯಾವುದೇ ಮನುಷ್ಯನಿಗೆ ಸೇರಿದ್ದಲ್ಲ, ಹಾಗಾಗಿ ಇದು ಅಲ್ಲಾಹ್ ಮಿಯಾದೇ ಆಗಿರಬೇಕು ಎಂದು ಮೌಲ್ವಿ ಭಾವಿಸಿದ.

ಬಹಳ ಆನಂದದಿಂದ ತನ್ನ ತಲೆಯ ಮೇಲೆ ಆ ಚಪ್ಪಲಿಯನ್ನು ಹೊತ್ತು ಒಳಹೋಗಿ ಚಾದರ್ ಮೇಲಿರಿಸಿ ಅವುಗಳಿಗೆ ಮುತ್ತಿಕ್ಕಿ ತಲೆಬಾಗಿ ನಮಸ್ಕರಿಸಿದ.

ಏಕೆ?

ಏಕೆಂದರೆ ಆ ಚಪ್ಪಲಿ ಅಲ್ಲಾಹ್ದು ಆಗಿತ್ತಲ ಅದಕ್ಕೆ

ಮಸೀದಿಗೆ ಬಂದ ಹಾಗೂ ಸುತ್ತಮುತ್ತಲ ಎಲ್ಲ ಜನರಿಗೆ ತೋರಿಸಿದ, “ನೋಡಿ, ಈ ಚಪ್ಪಲಿ ಅಲ್ಲಾಹನಿಗೆ ಸೇರಿದ್ದು”, ಎಂದು ಹೇಳಿ ಅದನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಅದಕ್ಕೆ ಮತ್ತೆ ಮತ್ತೆ ಮುತ್ತಿಕ್ಕಿದ.

  ಸಾಧನೆಯ ಗರ್ವ - ಪಂಚತಂತ್ರದ ಒಂದು ಪುಟ್ಟ ಕಥೆ

ಈ ವಿಷಯ ಅಕ್ಬರ್‌ಗೆ ಹೋಯಿತು.
 
ಓಹೋ!! ಹೌದೇ ಅದನ್ನು ನನಗೂ ತೋರಿಸಿ ಎಂದ ಅಕ್ಬರ್.

ಅಕ್ಬರ್ ನೋಡಿದ
ಇದು ಅಲ್ಲಾಹನ ಚಪ್ಪಲಿಯೇ ಸರಿ ಎಂದು ಹೇಳಿ ಅದನ್ನು ಭಕ್ತಿಯಿಂದ ಮುತ್ತಿಕ್ಕಿ, ಅದನ್ನು ತಲೆಯ ಮೇಲೆ ಇಟ್ಟುಕೊಂಡು ಮಸೀದಿಯಲ್ಲಿ ಉತ್ತಮ ಸ್ಥಳದಲ್ಲಿ ಇರಿಸಿ ಎಂದು ಮೌಲ್ವಿಗೆ ಹೇಳಿದ.

ಬೀರ್ಬಲ್ ರಜೆ ಮುಗಿದ ನಂತರ ದರ್ಬಾರಿಗೆ ಬಂದು ರಾಜನಿಗೆ ನಮಸ್ಕರಿಸಿ ತಲೆತಗ್ಗಿಸಿ ನಿಂತುಕೊಂಡ.

“ಯಾಕೆ ಬೀರ್ಬಲ್, ಏನಾಯಿತು, ತಲೆ ತಗ್ಗಿಸಿ ಯಾಕೆ ನಿಂತಿರುವೇ?? ಎಂದು ಅಕ್ಬರ್ ಬಿರ್ಬಲ್‌ನನ್ನು ಕೇಳಿದ.

ಆಗ ಬೀರ್ಬಲ್, “ಖಾವಂದ್, ನಮ್ಮ ಮುತ್ತಾತನ ಕಾಲದ ಒಂದು ಚಪ್ಪಲಿಯನ್ನು ಕಳವು ಮಾಡಲಾಗಿದೆ ಎಂದು ಹೇಳಿದ”

ಅಕ್ಬರ್ ಹೇಳಿದರು – ಏನು ಒಂದು ಚಪ್ಪಲಿಯನ್ನು ಯಾರಾದರೂ ಕಳವು ಮಾಡುತ್ತಾರೆಯೇ?

ಹೌದು ಜಹಾಪನಾ, ಏಕೆಂದರೆ ಮತ್ತೊಂದು ಚಪ್ಪಲಿ ನನ್ನ ಬಳಿಯೇ ಇದೆ” ಎಂದು ಉತ್ತರಿಸಿದ ಬೀರ್ಬಲ್
ಅದನ್ನುಅಕ್ಬರ್‌ಗೆ ತೋರಿಸಿದ.

  ಝೆನ್ ಕಥೆಗಳು - ಒಂದು ಲೋಟ ಚಹಾ

ಅಕ್ಬರ್ ಆ ಚಪ್ಪಲಿಯನ್ನು ನೋಡಿ ಆಶ್ಚರ್ಯಗೊಂಡು ಮಸೀದಿಯಿಂದ ಮತ್ತೊಂದು ಚಪ್ಪಲಿಯನ್ನು ತರಿಸಿ ನೋಡಿದ ಅಯ್ಯೋ!! ಇವು, ಅಲ್ಲಾಹನಿಗೆ ಸೇರಿದವು ಎಂದು ನಾನು ಭಾವಿಸಿ, ನಾನು ಅದನ್ನು ಮುತ್ತಿಕ್ಕಿ ತಲೆಯಮೇಲೆ ಹೊತ್ತೆನಲ್ಲಾ” ಎಂದ

ಆಗ ಬೀರ್ಬಲ್ ರಾಜ, ಸಾಹೇಬ್ ಅವಿದ್ಯಾ ಎಂದರೆ ಇದು.
ಸತ್ಯವಾದ ವಿಷಯ ಏನು ಎಂದು ತಿಳಿದುಕೊಳ್ಳದೇ ಕುರಿಗಳಂತೆ ಯಾರೋ ಹೇಳಿದ್ದನ್ನು ಕೇಳಿ ನಂಬಿಬಿಡುತ್ತೇವಲ್ಲ ಎಂದು ಹೇಳಿದ.

Leave a Reply

Your email address will not be published. Required fields are marked *

Translate »