ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಮ್ಮ ಎನ್ನುವ ಅಡುಗೆ ಮನೆ ಕಲಾವಿದ

ಅಡುಗೆಮನೆ ಕೆಲ್ಸ ಅಂದ್ರೆ
ಬೇಯ್ಸೋದಷ್ಟೇ ಅಲ್ಲ..

ಮೊದ್ಲು ಪಾತ್ರೆ ಆರಿಸ್ಕೊಬೇಕು..

ಆಮೇಲೆ ಅಳತೆ ಅಂದಾಜು ಮಾಡ್ಕೋಬೇಕು..

ದಿನಸಿ ಲೆಕ್ಕಾಚಾರ ಇಡಬೇಕು..

ತೊಳೀಬೇಕು..
ಬಳೀಬೇಕು..
ಅಚ್ಚುಕಟ್ಟು ಮಾಡಬೇಕು..

ಕೊತ್ತಂಬರಿ ಕರಿಬೇವು ಮೆಣಸಿನಕಾಯಿ ಕೆಡದೇ ಇರೋ ಹಾಗ್ ಮ್ಯಾನೇಜ್ ಮಾಡೋ ಕಲೆ ಇರಬೇಕು..

ಹಳೆ ಹಾಲು
ಹೊಸ ಹಾಲು
ಹಳೆ ಡಿಕಾಕ್ಷನ್ನು
ಹೊಸಾ ಡಿಕಾಕ್ಷನ್ನು
ವ್ಯತ್ಯಾಸ ಗೊತ್ತಿರಬೇಕು..

ಕಾಫಿ ಪುಡಿ
ಟೀ ಪುಡಿ ವ್ಯತ್ಯಾಸ
ಗೊತ್ತಿರಬೇಕು..

ಯಾವ್ಯಾವ ತರಕಾರಿ
ಎಷ್ಟು ದಿನ ಫ್ರೆಷ್ ಇರುತ್ತೆ
ಯಾವುದು ಬೇಗ ಹಾಳಾಗುತ್ತೆ
ಅನ್ನೋದು ಗೊತ್ತಿರ್ಬೇಕು..

ಗೊತ್ತಿದ್ದರಷ್ಟೇ ಸಾಲದು..
ದಿನಾ ಒಂದೇ ತರ
ಅಡುಗೆ ಮಾಡದೆ
ವಿಧ ವಿಧವಾದ
ರುಚಿ ರುಚಿಯಾಗಿ
ತಯಾರಿಸಿ ಅಡುಗೆ ಮನೆ
ನಿಭಾಯಿಸೋ ನ್ಯಾಕ್
ಇರಬೇಕು..

  ಬ್ರಾಹ್ಮೀ ಮುಹೂರ್ತ ಎಂದರೇನು?

ಬಡಿಸೋಕ್ಕೆ ಗೊತ್ತಿರಬೇಕು..
ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೇದಕ್ಕೆ ಹಾಕಿಡೋ
ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು..

ಎರಡೆರಡು ಬರ್ನರುಗಳಲ್ಲಿ
ಬೇರೆ ಬೇರೆ ವೆರೈಟಿ ಮಾಡೋ
ಟೈಮ್ ಮ್ಯಾನೇಜ್ಮೆಂಟ್
ಗೊತ್ತಿರಬೇಕು..

ಒಂದು ದೋಸೆ ತಟ್ಟೇಲಿದ್ರೆ
ಇನ್ನೊಂದನ್ನ ಕಾವಲಿಯಲ್ಲಿ
ಮತ್ತೊಂದನ್ನ ಹಾಟ್ಬಾಕ್ಸಲ್ಲಿ ಕೂರಿಸೋ ಚಾಕಚಕ್ಯತೆ ಇರಬೇಕು..

ಸುಮ್ನೆ ಒಂದ್ ರಾಶಿ ಪಾತ್ರೆ
ಗುಡ್ಡೆ ಹಾಕದೇ
ಕನಿಷ್ಠ ಪಾತ್ರೆಗಳಲ್ಲೇ
ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು..

ಅಮ್ಮಾ.. ಅನ್ನೋ

(ಅಮ್ಮಾ ಅಂತ
ಬೇರೆ ಬೇರೆಯವರು
ಬೇರೆ ಬೇರೆ ರೀತಿಯಲ್ಲಿ
ಬೇರೆ ಬೇರೆಯದಕ್ಕೆ
ಕರೆಯುತ್ತಾರೆ)

  ಕಗ್ಗ - ಜೀವನದ ಕಲಿಕೆ

ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ ಟಾಸ್ಕಿಂಗ್ ಎಬಿಲಿಟಿ ಇರಬೇಕು..

ಸಣ್ಣ ಪುಟ್ಟ ಅವಘಡಗಳಾದಾಗ
ಧೃತಿಗೆಡದೆ
ಗಾಬರಿಯಾಗದೆ
ನಿಭಾಯಿಸೋ ಅಷ್ಟು
ಸೈನ್ಸು,
ಸಮಯಪ್ರಜ್ಞೆ,
ಸಾಮಾನ್ಯಜ್ಞಾನ ಇರಬೇಕು..

ಇಷ್ಟನ್ನೂ ಯಾವುದೇ
ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು
ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ
ಗೌರವ ಕೊಡೋ ದೊಡ್ಡಮನಸ್ಸಿರಬೇಕು..

ಅಡುಗೆಮನೆ ಕೆಲ್ಸಾನಾ…
ಅದೇನ್ ಮಹಾ ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕ್ಯಾಪಾಸಿಟಿ ನಿಮಗಿದ್ಯಾ ಅಂತ ಯೋಚಿಸಿ..

ಅಡುಗೆ ಮನೆ ಎಲ್ಲರ ಅವಶ್ಯಕತೆ..

  ನಾಳೆ ಏನು ತಿಂಡಿ ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ ?

ಅದೊಂದು ಧ್ಯಾನ..
ಅದೊಂದು ದಿನಚರಿ..
ಅದೊಂದು ಕಲೆ..
ಅದೊಂದು ವಿಜ್ಞಾನ..
ಅದೊಂದು ಅನುಭೂತಿ..
ಅದೊಂದು ಸೇವೆ..
ಅದೊಂದು ಪ್ರೀತಿ..
ಅದೊಂದು ಗೌರವ..
ಅದೊಂದು ಮೌಲ್ಯ..

ತಾತ್ಸಾರ ಬೇಡ…
ಎಲ್ಲಾ ಅಡುಗೆ ಮನೆ
ಕಲಾವಿದರಿಗೂ ಒಂದು
ದೊಡ್ಡ ನಮಸ್ಕಾರ 🙏

Leave a Reply

Your email address will not be published. Required fields are marked *

Translate »