ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧನ್ವಂತರಿ ಅಂದರೆ ಯಾರು ?

ಧನ್ವಂತರಿ
“ಓಂ ದಂ ಧನ್ವಂತರಿಯೇ ನಮಃ:”

“ಧನ್ವಂ” + “ಅಂತರಿ” = ಧನ್ವಂತರಿ
ಧನ್ವಂ – ಎಂದರೆ ರೋಗಗಳು; ಅಂತಾರಿ – ಎಂದರೆ – ನಾಶ. ಅದೇ ಧನ್ವಂತರಿಯು ಎಲ್ಲಾ ರೋಗಗಳನ್ನು ನಾಶಮಾಡುವವನು.


ನಮಾಮಿ ಧನ್ವಂತರಿಂ ಆದಿದೇವಂ ಸುರಾಸುರೈ: ವಂದಿತ ಪಾದಪದ್ಮಂ |
ಲೋಕೇ ಜರಾರುಗ್ಭಯ ಮೃತ್ಯುನಾಶಂ ಧಾತಾರಂ ಈಶಂ ವಿವಿಧ ಔಷಧೀನಾಂ |

( ನಾನು ಮೂಲ ದೇವತೆಯಾದ ಧನ್ವಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ, ಅವರ ಪಾದಕಮಲಗಳನ್ನು ದೇವತೆಗಳು ಮತ್ತು ರಾಕ್ಷಸರು ಪೂಜಿಸುತ್ತಾರೆ.
ಅವನು ಈ ಜಗತ್ತಿನಲ್ಲಿ ವೃದ್ಧಾಪ್ಯ, ರೋಗ, ಭಯ ಮತ್ತು ಮರಣವನ್ನು ನಾಶಮಾಡುತ್ತಾನೆ.)

  ಪ್ರಜಾಕೀಯಾವೇ ನಿಜವಾದ ಪ್ರಜಾಪ್ರಭುತ್ವ

ಧನ್ವಂತರಿ ಅಂದರೆ ಯಾರು ? ಧನ್ವಂತರಿ ರೂಪವು ಸಾಕ್ಷಾತ್ ಪರಮಾತ್ಮನ ಅವತಾರವಾಗಿದ್ದು, ಆ ರೂಪವು ಎರಡು ಸಲ ಕಂಡುಬಂದಿದೆ. ಒಮ್ಮೆ ಸಮುದ್ರಮಥನ ಕಾಲದಲ್ಲಿ ಭಾದ್ರಪದ ಶುಕ್ಲ ದ್ವಿತೀಯ ದಿನದಂದು ಅಮೃತ ಕಲಶವನ್ನು ಹಿಡಿದುಕೊಂಡು ವ್ಯಕ್ತವಾದ ರೂಪ . ಆ ರೂಪವನ್ನು ಅಬ್ಜ ಎಂದು ಕರೆಯುತ್ತಾರೆ. ಆಗ ಅಸುರರು ಅವನಿಂದ ಅಮೃತವನ್ನು ಕಸಿದಾಗ, ಮೋಹಿನಿ ರೂಪದಿಂದ ಶ್ರೀಹರಿ ಮತ್ತೆ ಪ್ರಕಟಗೊಂಡು ದೇವತೆಗಳಿಗೆ ಅಮೃತವನ್ನು ಹಂಚಿದ. ಮತ್ತೊಮ್ಮೆ ಕಾರ್ತೀಕ ಬಹುಳ ದ್ವಾದಶಿ ಯಂದು ಸುಧಾಂಶು ವಂಶದಿ ಮಗನಾಗಿ ಅವತರಿಸಿ ಆಯುರ್ವೇದ ಸಂಹಿತವನ್ನು ಉಪದೇಶಿಸಿದನು. ತಾನು ಮಾನವನಾಗಿ ಅವತರಿಸಿದ್ದರಿಂದ ಭಾರದ್ವಾಜ ಋಷಿಗಳಿಂದ ಆಯುರ್ವೇದವನ್ನು ಕಲಿತು, ಆಯುರ್ವೇದವನ್ನು ಪ್ರಚುರಪಡಿಸಿದ ರೂಪ. ಆಯುರ್ವೇದ ದಿಂದ ಕಾಯಚಿಕಿತ್ಸೆ, ಬಾಲಚಿಕಿತ್ಸೆ, ಗ್ರಹಚಿಕಿತ್ಸೆ, ಊರ್ದ್ವಾಂಗ ಚಿಕಿತ್ಸೆ, ದಂಷ್ಟ್ರಚಿಕಿತ್ಸೆ, ಜರಾಚಿಕಿತ್ಸೆ, ವಾಜೀಕರಣಚಿಕಿತ್ಸೆ ಇತ್ಯಾದಿ ೮ ವಿಭಾಗಗಳನ್ನು ಮಾಡಿ ಆಯುರ್ವೇದ ಪ್ರವರ್ತಕನೆಂದು ಖ್ಯಾತಿ ಪಡೆದನು.

  ೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

ಧನ್ವಂತರಿ ಧ್ಯಾನದ ಅಧಿಷ್ಟಾನ ಯಾವುದು ಮತ್ತು ಕ್ರಮವೇನು ?

“ಆತ್ಮಸಂಸ್ತಂ” ಎಂಬ ಮಾತಿನಿಂದ ಆಚಾರ್ಯರು ಧ್ಯಾನದ ಅಧಿಷ್ಟಾನವನ್ನು ತಿಳಿಸಿದ್ದಾರೆ. ನಮ್ಮ ಹೃದಯದಲ್ಲಿ ಅಗ್ನಿಮಂಡಲ ಚಂದ್ರಮಂಡಲ ಸೂರ್ಯ ಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣ ನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪ ಮಾಡಬೇಕು. ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು ೭೨೦೦೦ ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುವನು. ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳನಡುವೆ, ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗದಲ್ಲಿರುವ ಷಟ್ ಚಕ್ರಗಳಲ್ಲಿಯೂ ಇದೇ ಧನ್ವಂತರಿಯು ಅಮೃತಧಾರೆಯನ್ನು ಸುರಿಸುತ್ತಿರುವನು.

  ಸೂರ್ಯ ಅಷ್ಟೋತ್ತರ ಶತನಾಮಾವಳಿ


ಧನ್ವಂತರಿಯ ರೂಪ ಹೇಗಿದೆ ?

ಧನ್ವಂತರಿಯು ಅಮೃತಕಲಶವನ್ನು ಎಡಗೈಯಲ್ಲಿಯೂ, ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ ಧರಿಸಿದ್ದಾನೆ.

Leave a Reply

Your email address will not be published. Required fields are marked *

Translate »