ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜಲಪೂರಣ ತ್ರಯೋದಶಿ – ನೀರು ತುಂಬುವ ಹಬ್ಬದ ಆಚರಣೆ

ಜಲಪೂರಣ ತ್ರಯೋದಶಿ

ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ.

ಅಂದು ಸಂಜೆ ಹೊತ್ತು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು. ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು. ಅಥವಾ ಕನಿಷ್ಠ ಮನೆಯಲ್ಲಿ ಬರುವ ನಲ್ಲಿ ನೀರನ್ನು ಶುದ್ಧವಾಗಿ ಹಿಡಿದು, ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ, ಗಂಗೆಯನ್ನು ಒಂದು ನೀರು ಕಾಯಿಸುವ ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು. ಆ ಪಾತ್ರೆಯನ್ನು ಪುಷ್ಪಾದಿಗಳಿಂದ ಅಲಂಕಾರ ಮಾಡಿ, ದೇವರ ಮುಂದೆ ಮತ್ತು ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ, ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು, ಇಲ್ಲಿ ನೀರೇ ಗಂಗೆಯಲ್ಲ. ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.

ಸಂಕಲ್ಪ – ಆಚಮನ, ಕೇಶವಾದಿ …..

  ಗಣಪತಿ ಭಾಲಚಂದ್ರ ಸಂಕಷ್ಟ ಚತುರ್ಥಿ ಪುರಾಣ ಕಥೆ - ಪೂಜಾ ವಿಧಾನ

ಆಚಮನ ಮಾಡಿದ ನೀರನ್ನು ಆಚಮನಕ್ಕೆ ಮಾತ್ರ ಉಪಯೋಗಿಸಿ. ಬೇರೆ ಎಲ್ಲ ಪೂಜೆಗೂ ಬೇರೆ ನೀರನ್ನು ಉಪಯೋಗಿಸಿ.

ಬಾವಿಯಿಂದ ತಂದ‌ ನೀರಾಗಲಿ ಅಥವಾ ಯಾವುದೇ ನೀರಾಗಲಿ ಅದನ್ನು ಶೋಧಿಸಿ ಪೂಜೆಗೆ ಬಳಸಿ.

ಓಂ ಪ್ರಣವಸ್ಯ ಪರಬ್ರಹ್ಮ ಋಷಿ, ತ್ರಿವಿಕ್ರಮ ದೇವತಾ ಪ್ರಾಣಾಯಾಮೇ ವಿನಿಯೋಗ : |

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ತ್ರಯೋದಶ್ಯಾ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಜಲಪೂರ್ಣ ತ್ರಯೋದಶಿ ನಿಮಿತ್ತ ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ | ಯಥಾಶಕ್ತಿ, ಯಥಾ ಜ್ಞಾನ ಪೂರ್ವಕ, ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||

ಪ್ರಸೀದ ಭಗವನ್ ಆಗಚ್ಛಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ.

  ಸಂಕಷ್ಟಹರ ಚತುರ್ಥಿ

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |

ಭಾಗೀರಥೀಂ ಆವಾಹಯಾಮಿ.

ಓಂ ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣ್ಯಾ !

ಅಸಿಕ್ನ್ಯಾ ಮರುದ್ವ್ರದೇ ವಿತಸ್ತಯಾssರ್ಜೀಕಿಯಾ
ಶೃಣುಹ್ಯಾ ಸುಷೋಮಯಾ || (ಹೀಗೆ ಅಭಿಮಂತ್ರಿಸಿ)

ಓಂ ಭೂ: ಭಾಗೀರಥೀಂ ಆವಾಹಯಾಮಿ

ಓಂ ಭುವ: ಭಾಗೀರಥೀಂ ಆವಾಹಯಾಮಿ

ಓಂ ಸ್ವ: ಭಾಗೀರಥೀಂ ಆವಾಹಯಾಮಿ

ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ

ಗಂಗಾ ಸಹಿತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರಮಾ ತ್ರಿವಿಕ್ರಮಾಯ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ. !!

ಚಿಂತನೆ – ಈ ಜಲವೇ ಗಂಗೆಯಲ್ಲ. ಈ ಜಲದೊಳಗೆ ಸಕಲ ತೀರ್ಥಾಭಿಮಾನಿ ದೇವತೆಗಳೊಂದಿಗೆ ಗಂಗೆ ಇದ್ದಾಳೆ. ಆ ಗಂಗೆಯು ಸಕಲ ದೇವತೆಗಳಿಂದ ಸ್ತುತ್ಯನಾದ ಶ್ರೀ ರಮಾ ತ್ರಿವಿಕ್ರಮರ ಪೂಜಿಸುತ್ತಿದ್ದಾಳೆ. ಅಂತ ಅನುಸಂಧಾನ ಮಾಡಿಕೊಳ್ಳಬೇಕು.

ಅರ್ಘ್ಯ ಸಮರ್ಪಯಾಮಿ | ಪಾದ್ಯಂ ಸಮರ್ಪಯಾಮಿ !

ಆಚಮನಂ ಸಮರ್ಪಯಾಮಿ !

(ಅರ್ಘ್ಯ ಪಾತ್ರೆಯಲ್ಲಿ ನೀರು ಪ್ರತಿ ಮಂತ್ರಕ್ಕೂ ಬಿಡುವುದು)

ಪುನರಾಚಮನಂ ಸಮರ್ಪಯಾಮಿ !

ಪಂಚಾಮೃತ ಸ್ನಾನಂ ಸಮರ್ಪಯಾಮಿ !

  ಸಣ್ಣವರಿದ್ದಾಗ - ದೊಡ್ಡವರಾದ ಮೇಲೆ - ಕಾಲ

(ಹಾಲು, ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು)

ಸ್ನಾನಂ ಸಮರ್ಪಯಾಮಿ !

(ತಿಳಿ ನೀರು )

ವಸ್ತ್ರಂ ಸಮರ್ಪಯಾಮಿ ! ನಾನಾ ವಿಧ ಆಭರಣಾನಿ ಸಮರ್ಪಯಾಮಿ ! ಹರಿದ್ರಾ ಕುಂಕುಮ ಗಂಧಾನಿ ಸಮರ್ಪಯಾಮಿ ! ನಾನಾ ವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ !

ಅರ್ಘ್ಯ, ಪಾದ್ಯ, ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |

ದ್ವಾದಶನಾಮ ಪೂಜ – ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |

ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |

ನೀರಾಜನಂ ಸಮರ್ಪಯಾಮಿ |

ಮಂಗಳಾರತಿ ಮಾಡಬೇಕು

ಮಂತ್ರಪುಷ್ಪಂ ಸಮರ್ಪಯಾಮಿ !

ಅನೇನ ತ್ರಿವಿಕ್ರಮ ಪೂಜನೇನ ತಥಾ ಗಂಗಾ ಪೂಜನೇನ ಮಧ್ವಾಂತರ್ಗತ ಗಂಗಾಜನಕ ತ್ರಿವಿಕ್ರಮಾತ್ಮಕ ಶ್ರೀ ಗೋಪಾಲಕೃಷ್ಣ ಪ್ರೀಯತಾಂ ಶ್ರೀ
ಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *

Translate »