ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾಲಕ್ಷ್ಮಿ – ಶ್ರೀ ಮಹಾಲಕ್ಷ್ಮ್ಯಷ್ಟಕಮ್

ಶ್ರೀ ಮಹಾಲಕ್ಷ್ಮ್ಯಷ್ಟಕಮ್


ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||೧||

ಭಾವಾರ್ಥ:-ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ ಮೇಲೆ ವಿರಾಜಿಸುವವಳೇ,ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ; ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ,ಗಧೆಗಳನ್ನು ಧರಿಸಿರುವಾಕೆಯೇ, ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೨||

ಭಾವಾರ್ಥ:-ಹೇ ದೇವಿ ಗರುಢ ವಾಹನೆಯೇ! ಕೋಲನೆಂಬರಕ್ಕಸನನ್ನು ನಾಶಗೊಳಿಸಿದವಳೇ,ನಿನಗಿದೋ ನಮಸ್ಕಾರಗಳು.ಎಲ್ಲಾ ಪಾಪಗಳನ್ನು ನಾಶ ಮಾಡುವ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ |
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೩||

  ವರ ಪ್ರದ ಹನುಮoತ ಕವಚ

ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ, ಎಲ್ಲವನ್ನೂ ಅನುಗ್ರಹಿಸುವಾಕೆಯೇ,ದುಷ್ಟರಿಗೆ ಭಯಂಕರ ರೂಪಿಣಿಯೂದವಳೇ,ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮಿ ನಮೋಸ್ಸ್ತುತೇ ||೪||

ಭಾವಾರ್ಥ:-ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ ,ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ |
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ಸ್ತುತೇ ||೫||

ಭಾವಾರ್ಥ:-ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ, ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ, ಯೋಗಮಾಯೆಯಿಂದ ಜನಿಸಿದಾಕೆಯೇ,ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

  ಪಂಚಭೂತ ಮಂತ್ರಗಳು

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೬||

ಭಾವಾರ್ಥ:-ಅಸಾಮಾನ್ಯಳೂ,ಸಾಮಾನ್ಯಳೂ, ಮಹಾರುದ್ರ ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೭||

ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ, ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ ತಾಯಿಯೇ, ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೮||

  ಕನ್ನಡ ಪದಗಳಲ್ಲಿ ಜೀವನ

ಭಾವಾರ್ಥ:-ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ, ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.


             || ಇತಿ ಶ್ರೀ ಮಹಾಲಕ್ಷ್ಯಷ್ಠಕಮ್ ||
     || ಈ ರೀತಿಯಾಗಿ ಶ್ರೀ ಮಹಾಲಕ್ಷ್ಮ್ಯಷ್ಠಕಗಳ  ಭಾವಾರ್ಥವು||

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬

Leave a Reply

Your email address will not be published. Required fields are marked *

Translate »