ಭೀಷ್ಮಾಚಾರ್ಯರು…
ಅಮರ ಸಿಂದೂದ್ಭವ, ಗಂಗೆಯನ್ನು ಮುಟ್ಟಿದರೇನೆ ಪಾವಿತ್ರ್ಯ ಅಂಥಾ ಗಂಗೆಯಲ್ಲಿ ಹಟ್ಟಿದವನು ಗಂಗೆಯಪುತ್ರನಾದವರು “#ಭೀಷ್ಮಾಚಾರ್ಯರು”..
ಮೃತ್ಯುವನ್ನು ತಾನಾಗಿಯೇ ಬಾ ಎಂದು ಕರೆದರೇ ಬರುತ್ತಿತ್ತು ಮೃತ್ಯು…..
ಇಂಥಾ ಶಕ್ತಿಸಂಪನ್ನನಾದವರು ಯಾಕೆ ಕೊನೆಗಾಲದಲ್ಲಿ ಅಂದರೇ ಸಾಯುವ ಸಂಧರ್ಭದಲ್ಲಿ
” ಬಾಣಗಳ ಮೇಲೆ ಮಲ್ಕೊಂಡು, ಎಷ್ಟೋ ತಿಂಗಳು ಗಾಯಗಳ ನೋವನ್ನು ಅನುಭವಿಸುತ್ತ ಮಲಗಿಬಿಟ್ಟರಲ್ಲ….” ಎಂದು ನಮಗೆಲ್ಲ ಅನ್ನಿಸಬಹುದು.
ಅವರು ನಿಜವಾಗಿಯೂ ಒಳ್ಳೆಯವರಾಗಿದ್ರೇ ಈ ದುರಾವಸ್ಥೆಯಲ್ಲಿ ಯಾಕೆ ಪ್ರಾಣ ಬಿಡಬೇಕಾಗಿತ್ತು….?
(ಇದಕ್ಕೆ ಕೆಲವರು ಉತ್ತರಾಯಣ ಬರಲಿ ಎಂದು ಕಾಯುತ್ತಿದ್ದರು ಎಂದು ಹೇಳುವುದುಂಟು ಇರಬಹುದು, ಆದರೇ ನಿಜವಾದ ಕಥೆ ಏನು ಎನ್ನುವುದೇ ಮುಂದಿನ ಕಥೆ ಓದಿ…)
ಬ್ರಹ್ಮನ ಆಸ್ಥಾನ, ಎಲ್ಲ ಋಷಿಗಳು ಕುಳಿತುಕೊಂಡಿದ್ದಾರೆ
( ಋಷಿಗಳು ಎಂದರೇ ಬ್ರಹ್ಮ ಲೋಕದಲ್ಲಿ ಕುಳಿತುಕೊಳ್ಳುವಂತಹ ಮಹಾ ತಪಸ್ವಿಗಳಾದ ದೊಡ್ಡ ದೊಡ್ಡ ಋಷಿಗಳು)
ಆ ಆಸ್ಥಾನಕ್ಕೆ ಗಂಗೆ ಬಂದಳು, ಗಂಗೆ ಬಂದಾಗ ಸ್ವಲ್ಪ ಗಾಳಿ ಬಿಸಿತು, ಗಾಳಿ ಜೋರಾಗಿ ಬೀಸಿದಾಗ, ಆಕೆಯ ಸೀರೆ ಸ್ವಲ್ಪ ಅಸ್ತವ್ಯಸ್ತವಾಯಿತು. ಅಲ್ಲಿ "#ಮಹಾಭಿಷಿಕ್" ಎನ್ನುವಂತಹ ಒಬ್ಬ ರಾಜ (ಋಷಿ) ಅಚಾತುರ್ಯದಿಂದ ನೋಡಿದ,
ಆಗ
ಬ್ರಹ್ಮದೇವರು:- “ನನ್ನ ಸಭೆಗೆ ಬರಬೇಕಾದರೇ ಕೆಲವು ಯೋಗ್ಯತೆಗಳು ಇರಬೇಕು, ಸಂಸ್ಕೃತಿಯ ಆಕಾರವನ್ನು ಹೊಂದಿ ಬರಬೇಕು, ಸಭ್ಯತೆಯನ್ನು ಕಲಿತಿರಬೇಕು, ಯಾವುದೇ ಕಾರಣದಿಂದಲೂ ಆ ಸಮಯದಲ್ಲಿ ನೋಡಬಾರದು, ನೋಡಿದ್ದಿಯಾ ಆದ್ದರಿಂದ ನಿನಗೆ ಚಾಪಲ್ಯವಿದೆ ಅಂತ ಅರ್ಥ. ಹಾಗಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಕಷ್ಟವನ್ನ ಅನುಭವಿಸು…”
ಹಾಗೆ
ಗಂಗೆಯನ್ನೂ ನೋಡಿ…
ಬ್ರಹ್ಮ:- “ನೀನೂ ನನ್ನ ಸಭೆಯಲ್ಲಿ ಇರುವುದಕ್ಕೆ ಯೋಗ್ಯತೆಯವಳಲ್ಲ. ಆದ್ದರಿಂದ ನೀನೂ ಭೂಲೋಕದಲ್ಲಿ ಹುಟ್ಟು ಎಂದು ಶಾಪ ಕೊಟ್ಟರು…”
ಹೀಗಾಗಿ ಗಂಗೆ ಕೆಳಗೆ ಇಳಿದು ಬರುತ್ತಿರುವಾಗ ಪಕ್ಕದಲ್ಲಿ ಎಂಟು ಜನ ವಸುಗಳೂ ಇಳಿದು ಬರುತ್ತಿದ್ದರು.
ಅವರನ್ನೆಲ್ಲ ನೋಡಿದ
ಗಂಗೆಯು:- “ಯಾಕೆ ಅಷ್ಟವಸುಗಳು (ದೇವತೆಗಳು) ಕೆಳಗೆ ಬೀಳ್ತಿದ್ದೀರ…?” ಎಂದು ಅವರನ್ನೆಲ್ಲ ಕೇಳಿದಳು.
ಆಗ ಅವರು ತಮ್ಮ ಕಥೆಯನ್ನು ಹೇಳಿದರು….
"ನಾವೆಲ್ಲರೂ ( ಅಷ್ಟವಸುಗಳು) ನಮ್ಮ ಹೆಂಡತಿಯ ಜೊತೆ ವನವಿಹಾರಕ್ಕೆ ಹೋಗಿದ್ದೆವು. "#ವಸಿಷ್ಠಮಹರ್ಷಿ"ಗಳ ಆಶ್ರಮಕ್ಕೆ ಹೋದೆವು. ಅಲ್ಲಿ #ನಂದಿನಿ ಎನ್ನುವ ಹಸು ಓಡಾಡುತ್ತಿದ್ದುದನ್ನು ಕಂಡು,
“ನನಗೆ ಭೂಲೋಕದಲ್ಲಿ ಒಬ್ಬ ಸ್ನೇಹಿತೆ ಇದ್ದಾಳೆ. ಉಷಿನರ ಮಗಳು ಅವಳು, ನಾನು ಅಮರಳಾಗಿದ್ದೇನೆ, ವಸಿಷ್ಠರ ಆಶ್ರಮದಲ್ಲಿ ಇರುವ “#ನಂದಿನಿ” ಎಂಬ ಹಸುವಿನ ಹಾಲನ್ನು ನನ್ನ ಸ್ನೇಹಿತೆ ಕುಡಿದರೇ ಅಮರಳಾಗುವುದಿಲ್ಲ, ಆದರೇ ಸುಮಾರು “ಹತ್ತುಸಾವಿರ ವರ್ಷಗಳು” ಬದುಕಬಲ್ಲಳು. ಹಾಗಾಗಿ ಹಸುವನ್ನೋ ಅಥವಾ ಅದರ ಹಾಲನ್ನಾದರೂ ತೆಗೆದುಕೊಂಡು ಬನ್ನಿ” ಅಂತ.
ಹೀಗೆ
ನಮ್ಮಲ್ಲಿ ” ದ್ಯೂ” ಎನ್ನುವ ವಸುವಿನ ಹೆಂಡತಿ ಕೇಳಿಕೊಂಡಳು…
(ಹೆಂಡತಿಯ ಮಾತಿಗೆ ಒಲಿಯದ ಗಂಡ ಯಾರಿದ್ದಾರೆ…?)
ದ್ಯೂ ಅವನ ಸಹೋದರರ ಜೊತೆಗೆ ವಸಿಷ್ಠರ ಆಶ್ರಮಕ್ಕೆ ಹೋಗಿ, ಸ್ವಲ್ಪವೂ ಸಭ್ಯತೆ ಇಲ್ಲದೇನೆ ಮತ್ತು ವಸಿಷ್ಠರನ್ನ ಒಂದು ಮಾತು ಕೇಳದೇನೆ, ನಂದಿನಿಯ ಕೊರಳಿಗೆ ಹಗ್ಗವನ್ನ ಕಟ್ಟಿ ಎಳೆದೊಯ್ದರು...
ವಸಿಷ್ಠರು ಆಶ್ರಮಕ್ಕೆ ಬಂದಾಗ ಹಸು ಕಾಣಿಸಲಿಲ್ಲ ಕಣ್ಣುಮುಚ್ಚಿ ತಪಃಶಕ್ತಿಯಿಂದ ನೋಡಿದರು, ಎಲ್ಲ ಗೊತ್ತಾಯ್ತು ಆಗ,
ವಸಿಷ್ಠರು:- “ನೀವು ನನ್ನ ಹಸುವನ್ನ ಕದ್ದಿದ್ದೀರಾಗಿ ಯಥಾ ಪ್ರಕಾರ ಮನುಷ್ಯರಾಗಿ ಹುಟ್ಟಿ” ಎಂದು ಶಾಪ ಕೊಟ್ಟರು…
( ಮನುಷ್ಯರಾಗಿ ಹುಟ್ಟಬೇಕು ಎಂದರೇ ಕಷ್ಟಪಡಬೇಕು ಎಂದು ಅರ್ಥ)
ಅಷ್ಟ ವಸುಗಳು ಋಷಿಗಳ ಕಾಲಿಗೆ ಬಿದ್ದು ” ನಮ್ಮದು ತಪ್ಪಾಯಿತು ದಯಮಾಡು ಕ್ಷಮಿಸಿ ಶಾಪವನ್ನ ಹಿಂದಕ್ಕೆ ಪಡೆದುಕೊಳ್ಳಿ” ಎಂದು ಬೇಡಿಕೊಂಡರು….
ವಸಿಷ್ಠರು:- “ಹಾಗಾದರೇ ಒಂದು ವಿಷಾಪವನ್ನ ಕೊಡುತ್ತಿದ್ದೇನೆ. ನೀವು ಯಾರು ಎಷ್ಟು ಬೇಗ ಸಾಯುತ್ತೀರೋ ಅಷ್ಟು ಬೇಗ ವಾಪಾಸು ಬಂದುಬಿಡ್ತೀರ, ನೀವು ಯಾಕೆ ಹುಟ್ಟುತ್ತಿದ್ದೀರ ಅಂದ್ರೇ ಸಾಯಲಿಕ್ಕೆ ಹುಟ್ಟತ್ತಿದ್ದೀರಿ, ಆದರೇ ಒಬ್ಬನು ಮಾತ್ರ ಹಾಗೆ ಬರುವುದಕ್ಕೆ ಆಗುವುದಿಲ್ಲ, ಯಾರೆಂದರೇ ಅವನು “ದ್ಯೂ”. ಯಾಕೆಂದರೇ ತನ್ನ ಹೆಂಡತಿಯ ಮಾತನ್ನು ಕೇಳಿ ಕದ್ದನಲ್ಲ ಮತ್ತು ಎಳೆದುಕೊಂಡು ಹೋಗುವಾಗ
“ತುಂಬಾ ಮುಳ್ಳಿರುವ ಒಂದು ದೊಣ್ಣೆಯಿಂದ ಹೊಡೆದ”
ಆದ್ದರಿಂದ ಅವನು ಮುಳ್ಳಿನ ಅಭಾಸವನ್ನು ಅನುಭವಿಸುವ ವರೆಗೂ ವಾಪಾಸು ಬರುವಹಾಗಿಲ್ಲ..
ಈ ಕಥೆಯನ್ನ ಅಷ್ಟವಸುಗಳೆಲ್ಲರು ಗಂಗೆಗೆ ಹೇಳಿ, ಪ್ರಾರ್ಥನೆ ಮಾಡಿದರು…
“ಅಮ್ಮಾ, ಹೇಗಿದ್ದರೂ ನೀನು ಭೂಮಿಗೆ ಇಳಿತಾ ಇದ್ದಿಯ. ಹಾಗಾಗಿ ದಯವಿಟ್ಟು ನಿನ್ನ ಹೊಟ್ಟೆಯಲ್ಲಿ ನಾವು ಹುಟ್ಟುವುದಕ್ಕೆ ಒಪ್ಪಿಕೊ ಮತ್ತು ನಾವು ಹುಟ್ಟಿದಾಗಲೇ ನಮ್ಮನ್ನ ಸಾಯಿಸು ನಾವು ವಾಪಾಸು ಹೋಗುತ್ತೇವೆ. ಆದರೇ ಒಬ್ಬನನ್ನ ಮಾತ್ರ ಹಾಗೆ ಸಾಯಿಸಬಾರದು ಅದು ಯಾರೆಂದರೇ ದ್ಯೂ” ಎಂದು ಬೇಡಿಕೊಂಡರು.
ಗಂಗೆ ಒಪ್ಪಿಕೊಂಡಳು, ಭೂಮಿಗೆ ಬಂದಳು.
ಶಂತನು ಗಂಗೆಯನ್ನು ನೋಡಿದ, ಮದುವೆಯಾಗಲು ಕೇಳಿದ.
ಗಂಗೆ:- “ನೀನು ನನ್ನ ಮದುವೆಯಾಗಬೇಕೆಂದರೇ ನಾನು ಮಾಡತಕ್ಕಂತಹ ಯಾವುದೇ ಕೆಲಸಕ್ಕೆ ನೀನು ಇಲ್ಲ ಎನ್ನಬಾರದು, ನೀನು ಇಲ್ಲ ಎಂದರೇ ನಾನುಬಿಟ್ಟು ಹೋಗುತ್ತೇನೆ” ಎಂದಳು.
ಪ್ರೇಮದ ಶಿಖರದಲ್ಲಿದ್ದ ಶಂತನು “ಹೂ, ಹೌದು” ಎಂದು ಮದುವೆಯಾದ.
ನಂತರ…
ಮೊದಲನೆಯ ಮಗು ಹುಟ್ಟಿತು ಗಂಗೆ ನದಿಯಲ್ಲಿ ಹಾಕಿದಳು,
ಎರಡನೆಯದು ಹುಟ್ಟಿತು ಮತ್ತೆ ನೀರಿನಲ್ಲಿ ಹಾಕಿದಳು,
ಮೂರನೆಯದು, ನಾಲ್ಕನೆಯದು, ಐದು, ಆರು, ಏಳನೆಯದು ಮಗು ಹುಟ್ಟಿತು ಒಬ್ಬೊಬ್ಬರನ್ನೇ ನೀರಲ್ಲಿ ಹಾಕಿದಳು.
ಶಂತನು ಇದನ್ನೆಲ್ಲ ನೋಡ್ತಾ ಇದ್ದವನು ಮನಸ್ಸಿಗೆ ಸಮಾಧಾನವಾಗದೇ ಎಂಟನೆಯದು ಹುಟ್ಟಿದಾಗ ಗಂಗೆ ನದಿಯಲ್ಲಿ ಹಾಕುವ ಸಮಯದಲ್ಲಿ,
ಗಂಗೆಯ ಕೈ ಹಿಡಿದು, “ಒಬ್ಬನನ್ಬಾದರೂ ನನಗೆ ಬಿಟ್ಟುಕೊಡು” ಎಂದು ಕೇಳಿದ.
ಗಂಗೆ:- “ಸರಿ ತೆಗೆದುಕೋ” ಎಂದು ಕೊಟ್ಟಳು.
ಗಂಗೆ ಕಾಣದೆ ಹೋದಳು. ಕೊನೆಗೆ ಹುಟ್ಟಿರುವ ಮಗನೆ “#ದೇವವ್ರತ” ಅವನೆ ಮುಂದೆ #ಭೀಷ್ಮನಾದ….
ಆ ಭೀಷ್ಮ ಭೀಷ್ಮಾಚಾರ್ಯರಾಗಿ ಹತ್ತು ದಿನಗಳವರೆಗೆ ಯುದ್ಧ ಮಾಡಿದ ಮೇಲೆ ಶರಶಯ್ಯೆಯಲ್ಲಿ ಮಲಗಿದ್ದಾರೆ ಎಂದರೇ, ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಕ್ಕೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ...
( ಈ ಜನ್ಮದಲ್ಲಿ ಏನು ಮಾಡುತ್ತಿದ್ದೀರ ಎನ್ನುವುದಕ್ಕೆ ಮುಂದಿನ ಜನ್ಮ ಹೇಗೆ ಎನ್ನುವುದು ನಿರ್ಣಯವಾಗುತ್ತದೆ ಅಥವಾ ಬದುಕು ಹೇಗೆ ಎಂದು ನಿರ್ಣಯವಾಗುತ್ತದೆ. ಆದ್ದರಿಂದ ಭೀಷ್ಮಾಚಾರ್ಯರು ಬಹಳ ದೊಡ್ಡ ವ್ಯಕ್ತಿ ಆಗಿದ್ದರೂ, ಆವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಕ್ಕೆ ಈಗಿನ ಜನ್ಮದಲ್ಲಿ ಶರಶಯ್ಯೆಯಲ್ಲಿ ಮಲಗಬೇಕಾಯಿತು….)
-:ಶ್ರೀಕೃಷ್ಣಾರ್ಪಣಮಸ್ತು:-
ಬರಹ:- ಗಣೇಶ್ ಗೋಸಾವಿ
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏