ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೌಶಿಕ ಮುನಿ ಮತ್ತು ಅಹಂಕಾರದ ಕಥೆ

ಮನುಷ್ಯ ತನ್ನ ಕರ್ತವ್ಯ ಪಾಲನೆ ಮಾಡುವುದು ಧರ್ಮ

ಕೌಶಿಕ ಮುನಿ ತಪಸ್ಸು ಮಾಡುತ್ತಾ ಗಿಡದ ಕೆಳಗೆ ಕೂತಿರುತ್ತಾರೆ ಕಾಗೆ ಮೇಲಿಂದ ಇವರ ತಲೆಯ ಮೇಲೆ ಹೊಲಸು ಮಾಡುತ್ತದೆ ಇವರು ಕಣ್ಣೆತ್ತಿ ಮೇಲೆ ನೋಡಿದಾಗ ಕಾಗೆ ಉರಿದು ಕೆಳಗೆ ಬಿದ್ದು ಬಸ್ಮವಾಗುತ್ತದೆ,
ಕೌಶಿಕರಿಗೆ ನನಗೆ ತಪಸ್ಸಿನ ಮಹಾಶಕ್ತಿ ಬಂತು ಎಂಬ ಅಹಂಕಾರ ಬರುತ್ತದೆ, ತಕ್ಷಣ ಅಲ್ಲಿಂದ ಎದ್ದು ಪಕ್ಕದ ಗ್ರಾಮದ ಒಂದು ಮನೆಯ ಮುಂದೆ ಹೋಗಿ ಭಿಕ್ಷಾಮ್ ದೇಹಿ ಎಂದು ಮೂರು ಸಲ ಕೂಗುತ್ತಾರೆ, ಮನೆಯ ಒಳಗಿಂದ ಉತ್ತರ ಬರದೇ ಇದ್ದಾಗ ನಾಲ್ಕನೇ ಸಲ ಗಟ್ಟಿಯಾಗಿ ಗುಡುಗುತ್ತಾರೆ, ಮನೆಯ ಒಳಗೆ ಅನಾರೋಗ್ಯ ಪತಿಯ ಸೇವೆಯಲ್ಲಿ ತನ್ನ ಕರ್ತವ್ಯ ಪಾಲನೆಯಲ್ಲಿ ನಿರತರಾಗಿದ್ದ ಪತ್ನಿ ಒಳಗಿಂದ ಕೌಶಿಕರಿಗೆ ಹೇಳುತ್ತಾಳೆ ಸ್ವಲ್ಪ ತಾಳಿ ಋಷಿಗಳೇ ಅಷ್ಟೇಕೆ ಕೋಪ ಮಾಡಿಕೊಳ್ಳುತ್ತಿದ್ದೀರಿ, ನಾನು ನನ್ನ ಕರ್ತವ್ಯ ಪಾಲನೆಯಲ್ಲಿದ್ದೇನೆ, ನಿಮ್ಮ ಕೋಪಕ್ಕೆ ಉರಿದು ಬೀಳಲು ನಾನೇನು ಕಾಗೆ ಅಲ್ಲ ಎನ್ನುತ್ತಾಳೆ, ಕೆಲವೇ ಸಮಯದ ಹಿಂದೆ ಕಾಗೆ ಉರಿದು ಬಿತ್ತಿದ್ದು ಈಕೆಗೆ ಹೇಗೆ ಗೊತ್ತಾಯಿತು ಎಂಬ ವಿಸ್ಮಯ ಗಾಬರಿ ಕೌಶಿಕರಿಗೆ, ತಾಯಿ ಈ ವಿಷಯ ನಿನಗೆ ಹೇಗೆ ತಿಳಿಯಿತು ಎಂದು ಕೌಶಿಕರು ಕೇಳುತ್ತಾರೆ, ಆಗ ಗಂಡನ ಸೇವೆ ಕರ್ತವ್ಯ ಪಾಲನೆಯಲ್ಲಿದ್ದ ಗ್ರಹಣಿ ಹೇಳುತ್ತಾಳೆ ನನಗೆ ಇದೆಲ್ಲ ಹೇಳಲು ಸಮಯ ಇಲ್ಲ ಪಕ್ಕದ ಓಣಿಯಲ್ಲಿ ಒಬ್ಬ ಕಟುಕ ಮಾಂಸ ಮಾರುತ್ತಾ ಇರುತ್ತಾನೆ ಆತನ ಹತ್ತಿರ ಹೋಗಿ ನಿಮಗೆ ವಿವರವಾಗಿ ಧರ್ಮ ಸೂಕ್ಷ್ಮತೆ ಹೇಳುತ್ತಾನೆ ಎನ್ನುತ್ತಾಳೆ, ತಕ್ಷಣ ಕೌಶಿಕರು ಆ ಮಾಂಸ ಮಾರುವ ಅಂಗಡಿಗೆ ಮುಂದೆ ಹೋಗುತ್ತಾರೆ ಆ ವ್ಯಾಪಾರಸ್ಥ ಋಷಿಗಳೇ ನಿಮಗೆ ಆ ಗ್ರಹಣಿ ಕಳಿಸಿದ್ದಾಳಲ್ಲ ನಾನು ನಿಮಗೆ ಧರ್ಮ ಸೂಕ್ಷ್ಮತೆ ಹೇಳಬಹುದು ಆದರೆ ಇದು ನನ್ನ ವ್ಯಾಪಾರದ ಸಮಯ ಹಾಗೂ ನಾನು ಮನೆಗೆ ಹೋಗಿ ನನ್ನ ವಯಸ್ಸು ಆದ ತಾಯಿ ತಂದೆಯ ಊಟ, ಉಪಚಾರ,ಸೇವೆ ಮಾಡಿಸುವುದಿದೆ, ನನ್ನ ಇಂದಿನ ಕರ್ತವ್ಯ ಇನ್ನೂ ಮುಗಿದಿಲ್ಲ ದಯಮಾಡಿ ಪಕ್ಕದ ಓಣಿಯಲ್ಲಿ ಒಬ್ಬ ವೇಶ್ಯೆ ಇದ್ದಾಳೆ ಆಕೆಗೆ ಹಗಲಿನಲ್ಲಿ ಏನು ಕೆಲಸ ಇರುವುದಿಲ್ಲ ದಯಮಾಡಿ ತಾವು ಅಲ್ಲಿಗೆ ಹೋಗಿ ಆಕೆ ತಮಗೆ ಧರ್ಮಸೂಕ್ಷ್ಮತೆ ಹೇಳಿಕೊಡುತ್ತಾಳೆ ಎನ್ನುತ್ತಾನೆ, ಆಗ ಕೌಶಿಕರು ಆ ವೇಶ್ಯೆ ಮನೆಗೆ ಹೋಗುತ್ತಾರೆ ಆಕೆ ಕೌಶಿಕರಿಗೆ ಧರ್ಮ ಸೂಕ್ಷ್ಮತೆಗಳನ್ನೆಲ್ಲ ಹೇಳುತ್ತಾಳೆ, ಆಕೆ ಹೇಳಿದ ಧರ್ಮ ಸೂಕ್ಷ್ಮತೆಗಳ ಸಾರಾಂಶ ಇಷ್ಟೇ ಮನುಷ್ಯ ತನ್ನ ಕರ್ತವ್ಯ ಪಾಲನೆ ಮಾಡುತ್ತಾ ಇರುವುದೇ ಧರ್ಮ, ನನ್ನ ಕರ್ತವ್ಯ ಈ ಸಂದರ್ಭದಲ್ಲಿ ,ಈ ಸಮಯದಲ್ಲಿ ಏನು ಎಂದು ನಿರ್ಣಯಿಸಲು ಧರ್ಮ ಸೂಕ್ಷ್ಮತೆ ನಿಮಗೆ ತಿಳಿದಿರಬೇಕು ಮನುಷ್ಯ ಆ ಧರ್ಮ ಬುದ್ಧಿ ಹೊಂದಿರಬೇಕು ಎಂದು ವೇಶ್ಯೆ ಕೌಶಿಕರಿಗೆ ಹೇಳುತ್ತಾಳೆ, ನೋಡಿ ಪ್ರತಿ ಮನುಷ್ಯ ನಿಗೆ ಪ್ರತಿದಿನ ಪ್ರತಿಕ್ಷಣ ನಮ್ಮ ಮುಂದೆ ನಮ್ಮ ಕರ್ತವ್ಯ ಏನು ಈಗ ನಾನೇನು ಮಾಡಬೇಕು ಎಂಬ ಪ್ರಶ್ನಾರ್ಥಕ ಚಿಹ್ನೆಯಾಗಿ ನಮ್ಮ ಕಣ್ಣೆದುರು ಬರುತ್ತಲೇ ಇರುತ್ತವೆ, ಆಗ ನಾವೇನು ಮಾಡಬೇಕು ನಮ್ಮ ಕರ್ತವ್ಯ ಈ ಸಮಯಕ್ಕೆ ಯಾವುದು ನಮ್ಮ ವಿವೇಕ ದಿಂದ ತಿಳಿದು ನಾವು ನಮ್ಮ ಕರ್ತವ್ಯ ತಪ್ಪದೇ ಮಾಡಿದಲ್ಲಿ ಇದೇ ಧರ್ಮ, ದೇವರ ಪೂಜೆ ,ಜಪ, ತಪ, ಹೋಮ, ತೀರ್ಥಯಾತ್ರೆ, ಉಪವಾಸ ,ಪಾರಾಯಣ, ಚಾತುರ್ಮಾಸ, ಎಲ್ಲದಕ್ಕೆ ಸಮಾನ, ನಮ್ಮ ಕರ್ತವ್ಯ ಮಾಡದೇ ಇದ್ದಲ್ಲಿ ಸಮಯ ಬಂದಾಗ ನಾವು ಮಾಡಬೇಕಾದ ಕರ್ತವ್ಯದಿಂದ ತಪ್ಪಿಸಿಕೊಂಡಲ್ಲಿ ಮೇಲಿನವು ಯಾವ ಪೂಜೆ ಪುನಸ್ಕಾರಗಳನ್ನು ಮಾಡಿದರು ದೇವರು ಸ್ವೀಕಾರ ಮಾಡುವುದಿಲ್ಲ,

  ಪ್ರಜಾಪ್ರಭುತ್ವ - Democracy - ಪ್ರಜಾಕೀಯ

Leave a Reply

Your email address will not be published. Required fields are marked *

Translate »