ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾಭಾರತದಲ್ಲಿ ಬರುವ ನವಗುಂಜರ

ಭಾರತೀಯ ಕ್ರಿಯಾತ್ಮಕ ಸೃಜನಶೀಲತೆಗೆ ಉದಾಹರಣೆ ಮಹಾಭಾರತದಲ್ಲಿ ಬರುವ ನವಗುಂಜರ..!
ವಿಷ್ಣುವಿನ ಅವತಾರ ಎಂದು ಹೇಳಲ್ಪಡುವ, ಹುಂಜದ ತಲೆ,‌ ನವಿಲಿನ ಕತ್ತು, ಸಿಂಹದ ಸೊಂಟ, ಹೋರಿಯ ಭುಜ, ಹಾವನ್ನು ಬಾಲವಾಗಿ ಹೊಂದಿ, ಆನೆ-ಹುಲಿ-ಕುದುರೆಯ ಮೂರು ಕಾಲುಗಳನ್ನು ಹೊಂದಿ, ನಾಲ್ಕನೇ ಭಾಗವಾಗಿ ಮಾನವನ‌ ಕೈ ಇದ್ದು, ಅದರಲ್ಲಿ ಕಮಲವನ್ನು ಹಿಡಿದಿರುವ ವಿಶಿಷ್ಠವಾದ, ವಿಷೇಶವಾದ ಒಂಭತ್ತು ಬಗೆಯ ಪ್ರಕಾರವುಳ್ಳ ಚಿತ್ರಣವು ಮಹಾಭಾರತದಲ್ಲಿ ಬರುತ್ತದೆ..!

ಕಾಡಿನಲ್ಲಿರುವ ಅರ್ಜುನನ್ನು ಕಾಣಲು ಬರುವ ಕೃಷ್ಣ ಈ ರೀತಿಯ ವೇಷದಲ್ಲಿ ಬರುತ್ತಾನೆ, ಕಂಡ ಭಯಗ್ರಸ್ತನಾದ ಅರ್ಜುನ ಅದನ್ನು ಕೊಲ್ಲಲು ಬಾಣ ಹೂಡುತ್ತಾನೆ. ಆದರೆ ಅದು ಕೃಷ್ಣನ ವಿರಾಟ್ ರೂಪ ಎಂದು ತಿಳಿದಾದ ಮೇಲೆ ನಮಸ್ಕರಿಸುತ್ತಾನೆ. ಈ ನವಗುಂಜರವನ್ನು ಒಡಿಸ್ಸಾದ ಪೂರಿ ಜಗನ್ನಾಥ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ‌. ಓಡಿಸ್ಸಾ- ಅತಿ ಹೆಚ್ಚಾಗಿ ಹಿಂದೂ ಸನಾತನ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವ ರಾಜ್ಯ..!

  ಸಂತ ಕವಿ ಜ್ಞಾನೇಶ್ವರ

ಜಗತ್ತಿನ ಯಾವುದೇ ನಾಗರೀಕತೆಯಲ್ಲೂ, ಅವರ ಪುರಾಣ ಕಥೆಗಳಲ್ಲೂ ಇಂತಹ ಹೆಚ್ಚು ವಿಷೇಶವಾದ ಚಿತ್ರಣ ಒಳಗೊಂಡಿರುವ ಕಲ್ಪನೆಗಳಿಲ್ಲಾ, ಅಷ್ಟೇಕೆ ಹಾಲಿವುಡ್ ಕೂಡ ಇಂತಹ ಕಲ್ಪನೆಯ ಆಯಾಮಕ್ಕೆ ಇನ್ನು ತೆರೆದುಕೊಂಡಿಲ್ಲಾ. ಅಷ್ಟು ಅತ್ಯುನ್ನತವಾದ ಕಲ್ಪನೆ ಮಹಾಭಾರತದಲ್ಲಿ ಐದುಸಾವಿರ ವರ್ಷಗಳ ಹಿಂದೆಯೇ ಮೂಡಿದೆ. ಇಂತಹವನ್ನು ಓದಿದ ಭಾರತೀಯರ ಕಲ್ಪನಾಶಕ್ತಿಯು ಸಹ ಬೆಳೆಯುತ್ತದೆ, ಆದ್ರೆ ಇವಾಗ ಧರ್ಮದ ಹೆಸರಿನಲ್ಲಿ ಬರಿ ಭ್ರಮೆ ತುಂಬಲಾಗುತ್ತಿದೆ, ಧರ್ಮವು ಅತ್ಯುನ್ನತವಾದ ಸೃಜನಶೀಲತೆಯ ಆಕರ ಜ್ಞಾನದ ಗಣಿಯಾಗಿದೆ,‌ಅದಕ್ಕೆ ಪ್ರಾಚೀನ ಭಾರತೀಯರು ಕಲೆ-ವಿಜ್ಞಾನ-ಸಾಹಿತ್ಯ-ಸಂಗೀತ-ಆಯುರ್ವೇದದಲ್ಲೆಲ್ಲಾ ಇಂದಿಗೂ ಜಗತ್ತು ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದು. ನಮ್ಮ ಪೂರ್ವಜರು ಕಟ್ಟಿಕೊಟ್ಟಿರುವ ಇಂತಹ ವಿಶಿಷ್ಠವಾದ ಕಲ್ಪನೆಗಳ ಕಥೆಗಳು ಮಕ್ಕಳಿಗೆ ಹೇಳಿ ಅವರಲ್ಲಿ ಕುತೂಹಲವನ್ನೂ, ಸೃಜನಶೀಲತೆಯನ್ನು ಬೆಳೆಸುವಂತಾದರೆ ಚೆಂದ..!

Leave a Reply

Your email address will not be published. Required fields are marked *

Translate »