ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ – ಆಟದ ಹಿನ್ನಲೆ ಕಥೆ

ನಾವೂ ಚಿಕ್ಕವರಿದ್ದಾಗ,
ಅವಲಕ್ಕಿ ಪವಲಕ್ಕಿ
ಕಾಂಚಣ ಮಿಣಮಿಣ ,
ಡಾಮ್ ಡೂಮ್, ಟಸ್ ಪುಸ್,
ಕೊಯ್ ಕೊಟಾರ್ ಅಂತಿದ್ವಿ.
ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅತ್ತೆ ಹೇಳಿದರು

“ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು.
ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.

  ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.

ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.

ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. ಹೇಗಿದೆ?

  ಪಂಚಮುಖಿ ಆಂಜನೇಯ ಸ್ವಾಮಿ ಹಿನ್ನಲೆ ಕಥೆ

“ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು. ಅತ್ತೆ ಮಾತು ಮುಂದುವರಿಸಿದರು.”

“ಅವಲಕ್ಕಿ, ಅಪಮಾನ ಮಾಡಬಾರದು. ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” ಹೌದು, ಎಂದು ಹೇಳಿದೆ.

ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ .

Leave a Reply

Your email address will not be published. Required fields are marked *

Translate »