ಒಬ್ಬ ಮಹಿಳೆ ಶಿವನನ್ನು ಒಲಿಸಿಕೊಳ್ಳೋದಕ್ಕ ಕಠಿಣ ತಪಸ್ಸಿಗೆ ಕೂತಿದ್ಳು.
ಶಿವ ಆಕೆಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಆಕೆಯನ್ನು ಕೇಳಿದ. “ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಯಾವುದಾದರೊಂದು ವರವನ್ನು ಕೇಳು”
ಮಹಿಳೆ:ದೇವಾ ನನಗೆ ಕೇವಲ ಒಂದು ವರವಲ್ಲ, ಮೂರು ವರ ಬೇಕು ನೀಡು ದೇವ ಅಂದಳು.
ಶಿವಾ ಯೋಚನೆ ಮಾಡಿದ.ಆಮ್ಯಾಲೆ ಹೇಳಿದ.ಆಯ್ತಮ್ಮ ಮೂರು ವರಗಳ ಕೊಡ್ತೀನಿ ಆದ್ರ ಒಂದು ಕಂಡೀಶನ್ನು ,ನೀನು ಏನು ವರ ಬೇಡ್ತೀಯೋ ನಿನ್ನ ಹತ್ತುಪಟ್ಟು ನಿನ್ನ ಅತ್ತೆಗೆ ಅದರ ಲಾಭ ಆಗ್ತದ ಅಂದ.
(ಶಿವ ಅಂದಕೊಂಡ ಈಕಿ ಹಂಗಾದ್ರ ಮೂರು ವರ ಬ್ಯಾಡ ಒಂದ ಇರಲಿ ಅಂತಾಳಂತ ಮಗುಳ್ನಗತಿದ್ದ 😀)
ಮಹಿಳೆ ಒಂದು ಕ್ಷಣ ಯೋಚನೆ ಮಾಡಿ, ಆಯ್ತು ಪ್ರಭು ಅಷ್ಟೇ ಆಗಲಿ ಅಂದ್ಳು.
೧ನೇ ವರ:ಪ್ರಭು ನನಗೆ ಹತ್ತು ಕೋಟಿ ಹಣ ನೀಡು.
ಶಿವ:ತಥಾಸ್ತು.
ಈಕೆಗೆ ಹತ್ತು ಕೋಟಿ.ಅತ್ತೆಗೆ ಹತ್ತು ಪಟ್ಟು ಅಂದ್ರ ನೂರುಕೊಟಿ ಕೊಟ್ಟ.
೨ನೇ ವರ:ಪ್ರಭು ನನ್ನನ್ನ ಅತ್ಯಂತ ಸುಂದರಿಯನ್ನಾಗಿ ಮಾಡು.
ಈಕೆ ಸುರಸುಂದರಿಯಾದಳು.ಈಕೆಯ ಅತ್ತೆ ಈಕೆಗಿಂತ ಹತ್ತು ಪಟ್ಟು ಸುಂದರಿಯಾದ್ಳು.
೩ನೇ ವರ:ಪ್ರಭು ನನಗೆ ಮೈಲ್ಡ್ ಹಾರ್ಟ್ ಅಟ್ಯಕ್ 💔 ನೀಡು ದೇವಾ.
ಶಿವ:ತಥಾಸ್ತು.
ಈಕೆಗೆ ಮೈಲ್ಡ್ ಹಾರ್ಟ್ ಅಟ್ಯಾಕ್.ಅತ್ತೆಗೆ ಧಡ್..ಧಡ್..ಧಡ್..ಧಡ್..ಧಡ್..ಅಂತ ಹತ್ತುಪಟ್ಟು ಹಾರ್ಟ್ ಅಟ್ಯಾಕ್ ಆಗಿ ಅತ್ತೆ ಶಿವನ ಪಾದ ಸೇರಿದ್ಳು.😨😰😱
ಅತ್ತೆಯ ನೂರು ಕೋಟಿ ಹಣವೂ ಸೊಸೆಯದಾಯಿತು 😁
ಆವಾಗಿನಿಂದ ಶಿವ ತ್ರಿಶೂಲ ಹಿಡಕೊಂಡು ‘ಹೆಣ್ಮಕ್ಳಿಗೆ ಬುದ್ಧಿ ಇರಂಗಿಲ್ಲ’ ಅಂದಾತನನ್ನ ಹುಡುಕ್ಲಿಕ್ಹತ್ಯಾನ
😂😂😂😂😂😂😂
ಹುಡುಕ್ತಾನೇ ಇರ್ತಾನಾ🤣🤣🤣🤣🤣🤣🤣